'ಅವರು ನನ್ನಂಥಹ ಚೆಲುವೆಯನ್ನು ನೋಡೇ ಇಲ್ಲ. ಅದಕ್ಕೆ ಬಂಧಿಸಿದ್ದಾರೆ': ಪೊಲೀಸ್ ವಿರುದ್ಧವೇ ಆರೋಪ ಹೊರಿಸಿದ ಸುಂದರಿ
Sunday, September 11, 2022
ನವದೆಹಲಿ: ನನ್ನಂಥಹ ಚೆಲುವೆಯನ್ನು ಅವರು ನೋಡಲೇ ಇಲ್ಲ ಎಂದೆನಿಸುತ್ತದೆ. ಅದಕ್ಕೆ ತನ್ನನ್ನು ಬಂಧಿಸಲಾಗಿದೆ ಎಂದು ಯುವತಿಯೊಬ್ಬಳು ಪೊಲೀಸರ ವಿರುದ್ಧವೇ ಆರೋಪ ಹೊರಿಸಿದ್ದಾಳೆ. ಆದರೆ ಆಕೆ ಮಾಡಿದ್ದೇನು?, ತಾವೇಕೆ ಬಂಧಿಸಿದ್ದೇವೆ ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.
ಯುಎಸ್‌ನ ನೆವಡದಲ್ಲಿನ ಹೆಂಡ್ ಬುಸ್ವಾಮಿ(28) ಪೊಲೀಸ್ ವಿರುದ್ಧವೇ ಆರೋಪ ಮಾಡಿದಾಕೆ. ಈಕೆಯನ್ನು ಲಾಸ್ ವೇಗಸ್ ನ ಹ್ಯಾರಿ ರೀಡ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಆ.31 ರಂದು ಬಂಧಿಸಲಾಗಿದೆ. ಇಲ್ಲಿನ ಚಿಲ್ಲಿಸ್ ರೆಸ್ಟೋರೆಂಟ್‌ನಲ್ಲಿ ಈಕರ ಬಿಲ್ ಕೊಡದೆ ಹೋಗಲೆತ್ನಿಸಿದದ್ದಳು. ಅಲ್ಲದೆ ಏರ್‌ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸ್ ದೂರು ನೀಡಲಾಗಿತ್ತು. ಆದರೆ ಪೊಲೀಸರು ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಳು.
ತಕ್ಷಣ ಈಕೆಯ ಹುಡುಕಾಟ ಆರಂಭಿಸಿದ ಪೊಲೀಸರು ಸೂಚಿಸಿದ್ದ ಚಹರೆಯ ಆಧಾರದಲ್ಲಿ ಯುವತಿ ಸೆಕ್ಯುರಿಟಿ ಚೆಕ್‌ಪಾಯಿಂಟ್ ಬಳಿ ಅವಿತುಕೊಂಡಿದ್ದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆಕೆಯನ್ನು ಬ್ಯಾಗೇಜ್ ಕ್ಲಮ್ ಏರಿಯಾದಲ್ಲಿ ಪತ್ತೆ ಮಾಡಿ ಹಿಡಿಯಲಾಗಿತ್ತು. ಬಂಧನ ಮಾಡಲು ಸಮಯದಲ್ಲಿ ಪ್ರತಿರೋಧ ತೋರಿದ್ದ ಯುವತಿ ವಶಕ್ಕೆ ಪಡೆಯಲು ಬಂದಿದ್ದ ಪೊಲೀಸರತ್ತ ಉಗಿದಿದ್ದಲ್ಲದೆ, 'ಅವರು ವಿಕೃತರು, ನನ್ನನ್ನು ಅತ್ಯಾಚಾರ ಮಾಡಲು ಬಂದರು. ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ. ಅದಕ್ಕೆ ಹೀಗೆಲ್ಲ ಮಾಡಿದ್ದಾರೆ' ಎಂದು ಆರೋಪಿಸಿದ್ದಾಳೆ.
ಆದರೂ ಪೊಲೀಸರು ಆಕೆಯನ್ನು ಬಂಧಿಸಿ ದುರ್ವರ್ತನೆ ಪ್ರಕರಣ ದಾಖಲಿಸಿದ್ದಾರೆ. ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದೀಗ ಈ ಯುವತಿ ಜಾಮೀನಿನ ಮೇಲೆ ಹೊರಗಿದ್ದು, ಅ.27ರಂದು ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.