-->
ಬಿಜೆಪಿ ಸರ್ಕಾರದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸರಣಿ ಅಪಮಾನ: ಸಚಿವ ರಮಾನಾಥ ರೈ ಕಿಡಿ

ಬಿಜೆಪಿ ಸರ್ಕಾರದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಸರಣಿ ಅಪಮಾನ: ಸಚಿವ ರಮಾನಾಥ ರೈ ಕಿಡಿ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಮಾಡಿರುವ ಬಿಜೆಪಿ ಸರ್ಕಾರದಿಂದ ನಾರಾಯಣ ಗುರುಗಳಿಗೆ ಸರಣಿ ಅಪಮಾನ ಮಾಡಿದೆ ಎಂದು ಮಾಜಿ ಸಚಿವ ಮಂಗಳೂರಿನಲ್ಲಿಂದು ಕಿಡಿಕಾರಿದರು.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ದಾರ್ಶನಿಕರ ಜನ್ಮದಿನವನ್ನು ವಿಧಾನಸೌಧದ ಬಾಕ್ವೆಂಟ್ ಹಾಲ್ ನಲ್ಲಿ ಮಾಡುವುದು ಕ್ರಮ. ಅದರಲ್ಲಿ ಸಿಎಂ ಭಾಗವಹಿಸಬೇಕು. ಆದರೆ ಬಿಜೆಪಿ ಸರಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ದ.ಕ.ಜಿಲ್ಲೆಗೆ ಸೀಮಿತಗೊಳಿಸಿದೆ ಎಂದು ಹೇಳಿದರು.

ಅಲ್ಲದೆ ನಾರಾಯಣ ಗುರುಗಳಿಂದಲೇ ನಿರ್ಮಾಣವಾಗಿರುವ ಕುದ್ರೋಳಿ ಶ್ರೀಕ್ಷೇತ್ರದಲ್ಲಿ ಅವರ ಜಯಂತಿ ಆಚರಣೆ ಮಾಡುವುದರ ಬದಲು‌ ಖಾಸಗಿ ಸಭಾಂಗಣದಲ್ಲಿ ಆಚರಿಸಲಾಗಿದೆ. ಜಿಲ್ಲೆಯಲ್ಲಿ ಆಚರಣೆ ಮಾಡಿದರೂ ಈ ಜಯಂತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಭಾಗವಹಿಸಬೇಕಿತ್ತು. ಅವರು ಭಾಗವಹಿಸಿಲ್ಲ. ಅಲ್ಲದೆ ಸಿಎಂ ಬೊಮ್ಮಾಯಿಯವರು ಒಂದು ಬಾರಿಯೂ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯಲ್ಲಿ ಭಾಗವಹಿಸಿಲ್ಲ. ಯಡಿಯೂರಪ್ಪನವರು ಕೂಡಾ ನಾರಾಯಣ ಗುರು ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇದರ ಅರ್ಥ ಏನೆಂದು ಜನರ ಮುಂದೆ ಹೇಳಬೇಕಾಗಿದೆ. ನಾನು ನಾರಾಯಣ ಗುರುಗಳಿಗೆ ಮಾಡಿರುವ ಅಪಮಾನವನ್ನು ಖಂಡಿಸುತ್ತೇನೆ ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜ್ಞಾನ ಮಂದಿರವನ್ನು ಬಂಟ್ವಾಳದಲ್ಲಿ ನಿರ್ಮಾಣ ಮಾಡಿದ್ದೆವು. ಆಗ ಸಿಎಂ ಆಗಿದ್ದ ಸಿದ್ಧರಾಮಯ್ಯ, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಸರ್ಕಾರಿ ಹಬ್ಬವನ್ನಾಗಿ ಮಾಡಿದ್ದರು. ಸಿದ್ಧರಾಮಯ್ಯನವರು ಬಾಕ್ವೆಂಟ್ ಹಾಲ್ ನಲ್ಲಿ ನಾರಾಯಣ ಗುರು ಜಯಂತಿಯನ್ನು ಆಚರಿಸಿದ್ದರು‌. ಆಗ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಕಾರ್ಯಕ್ರಮ ನಡೆದಿತ್ತು‌. ಬಿಜೆಪಿ ಗಣರಾಜ್ಯೋತ್ಸವ ಪರೇಡ್ ನಲ್ಲಿ ಟ್ಯಾಬ್ಲೋ ನಿರಾಕರಣೆ, 10ನೇ ತರಗತಿ ಪಠ್ಯದಲ್ಲಿ ಹೆಸರು ಕೈ ಬಿಟ್ಟಿರುವುದು, ನಾರಾಯಣ ಗುರು ಜಯಂತಿಯನ್ನು ಜಿಲ್ಲೆಗೆ ಸೀಮಿತ ಮಾಡಿ ಗುರುಗಳಿಗೆ ಅವಮಾನ ಮಾಡಲಾಗಿದೆ ಎಂದು ರಮಾನಾಥ ರೈಯವರು ಕಿಡಿಕಾರಿದರು.


Ads on article

Advertise in articles 1

advertising articles 2

Advertise under the article