
ವಿಧವೆಯ ಮೇಲೆ ಎರಗಿದ ಕಾಮುಕ ಯುವಕರಿಬ್ಬರನ್ನು ಕಂಬಿ ಹಿಂದೆ ಕಳುಹಿಸಿದ ಪೊಲೀಸರು
Wednesday, September 7, 2022
ಬೆಳಗಾವಿ: ವಿಧವೆಯ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕ ಯುವಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅನಗೋಳದಲ್ಲಿ ಇವರಿಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಮಾರ್ಕೇಟ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ಯಲ್ಲಪ್ಪನಾಯಿಕ(25) ಹಾಗೂ ದುರ್ಗೇಶ(24) ಬಂಧಿತ ಆರೋಪಿಗಳು.
ಎರಡು ವರ್ಷಗಳ ಹಿಂದೆ ಸಂತ್ರಸ್ತೆಯ ಪತಿ ಮಡಿದಿದ್ದರು. ಆರೋಪಿಗಳ ಪೈಕಿ ಓರ್ವ ಸಂತ್ರಸ್ತೆಯ ಸಂಪರ್ಕದಲ್ಲಿದ್ದ. ಫೋನ್ ಚ್ಯಾಟಿಂಗ್ ಕೂಡಾ ಮಾಡುತ್ತಿದ್ದರು. ರವಿವಾರ ಈ ಸ್ನೇಹಿತರಿಬ್ಬರು ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆಂದು ಆಕೆ ಸೋಮವಾರ ದೂರು ನೀಡಿದ್ದಾಳೆ. ಈ ದೂರಿನನ್ವಯ ಇಬ್ಬರನ್ನೂ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.