
Sulya -ಪ್ರವೀಣ್ ನೆಟ್ಟಾರು ಹತ್ಯಾ ಆರೋಪಿಗಳಿಗೆ ಜಾಮೀನು ನೀಡಬಾರದು. ಅವರಿಗೆ ಗಲ್ಲು ಶಿಕ್ಷೆ ಆಗಲೇ ಬೇಕು..!ಪ್ರಮೋದ್ ಮುತಾಲಿಕ್
Tuesday, September 20, 2022
ಸುಳ್ಯ
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಲೇ ಬೇಕು. ಈಗಾಗಲೇ ಮುಖ್ಯಮಂತ್ರಿ ಪ್ರವೀಣ್ ಕುಟುಂಬಕ್ಕೆ ನೀಡಿರುವ ಆಶ್ವಾಸನೆ ಕೂಡಲೇ ಈಡೇರಿಸಬೇಕು. ಯಾವುದೇ ಕಾರಣಕ್ಕೂ ಪ್ರವೀಣ್ ಕುಟುಂಬಕ್ಕೆ ಅನ್ಯಾಯ ಹಾಗೂ ಮೋಸ ಆಗಬಾರದು. ಆ ತರಹ ಏನಾದರೂ ಆದರೆ ಮುಖ್ಯ ಮಂತ್ರಿ ಮನೆ ಮುಂದೆ ಧರಣಿ ಕುಳಿತು, ಮುಖ್ಯಮಂತ್ರಿಗಳ ಮುಖಕ್ಕೇ ಮಸಿ ಬಳಿಯುತ್ತೇವೆ ಎಂದು ಹಿಂದೂ ಸಂಘಟನಾ ಮುಖಂಡ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಅವರು ಬೆಳ್ಳಾರೆಯಲ್ಲಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಮೃತ ಪ್ರವೀಣ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾಧ್ಯಮದೊಂದಿಗೆ ಮಾತನಾಡಿದರು.
ಭಾರತದಲ್ಲಿ ಒಟ್ಟಾರೆ ಮುಸ್ಲಿಂ ರಾಕ್ಷಸ ಪ್ರವರ್ತಿಯ ಜನರು ಹೆಚ್ಚಾಗುತ್ತಿದ್ದಾರೆ. ಪ್ರವೀಣ್ ಹತ್ಯೆ ನಿಜಕ್ಕೂ ಅತ್ಯಂತ ನೀಚ ಮತ್ತು ಪೈಶಾಚಿಕ ಕೃತ್ಯ. ಯಾವುದೇ ಕಾರಣಕ್ಕೂ ಈ ಆರೋಪಿಗಳಿಗೆ ಜಾಮೀನು ಸಿಗಬಾರದು. ಕಾನೂನು ಕ್ರಮಗಳನ್ನು ಅತೀ ಬೇಗನೆ ಸರಿಪಡಿಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು. ಅವರ ಮೇಲೆ ಕೋಕಾ ಕಾಯ್ದೆ ಹಾಕಬೇಕು. ಹಾಗೇ ಆದರೆ ಮಾತ್ರ ಪ್ರವೀಣ್ ಆತ್ಮಕ್ಕೆ ಶಾಂತಿ ಸಿಗುತ್ತೆ. ಮಾತ್ರವಲ್ಲದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗಾಗಲೇ ಘೋಷಣೆ ಮಾಡಿರುವ ಪ್ರಕಾರ ಪ್ರವೀಣ್ ಪತ್ನಿಗೆ ನೀಡಲು ಉದ್ದೇಶಿಸಿರುವ ಸರಕಾರಿ ಕೆಲಸ ಕೂಡಲೇ ಅವರಿಗೆ ನೀಡಿ ಈ ಕುಟುಂಬಕ್ಕೆ ನೆರವಾಗಬೇಕು. ಯಾವುದೇ ಕಾರಣಕ್ಕೂ ಪ್ರವೀಣ್ ಕುಟುಂಬಕ್ಕೆ ಅನ್ಯಾಯ ಹಾಗೂ ಮೋಸ ಆಗಬಾರದು. ಏನಾದರೂ ಶರತ್ ಮಡಿವಾಳ ಮತ್ತು ಪರೇಶ್ ಮೇಸ್ತಾ ಕುಟುಂಬಕ್ಕೆ ಮಾಡಿದ ತರಹ ಅನ್ಯಾಯ, ದ್ರೋಹ ಇನ್ನೂ ಮುಂದಕ್ಕೆ ಸರಕಾರ ಮಾಡಬಾರದು. ಆ ತರಹ ಏನಾದ್ರೂ ಆದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಿ ಮುಖ್ಯಮಂತ್ರಿ ಮುಖಕ್ಕೇ ಮಸಿ ಬಳಿಯಲಾಗುವುದು. ಸರಕಾರ ನಾನು ಇಲ್ಲಿಗೆ ಬರುವುದಕ್ಕೆ ನಿಷೇಧ ಹೇರಿತ್ತು ಇದನ್ನೂ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಶ್ರೀ ರಾಮ್ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.