ಶಿಕ್ಷಕರ ಅರ್ಹತಾ ಪರೀಕ್ಷೆ: ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆ ದಿನ
ಶಿಕ್ಷಕರ ಅರ್ಹತಾ ಪರೀಕ್ಷೆ: ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆ ದಿನ
2022ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆ(Karnataka Teacher eligibility test)ಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಸೆಪ್ಟಂಬರ್ 1ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಅರ್ಜಿ ಸಲ್ಲಿಕೆಗೆ ಸೆ.30 ಕೊನೆ ದಿನ. ಶುಲ್ಕ ಪಾವತಿಸುವುದಕ್ಕೂ ಇದೇ ಕೊನೆಯ ದಿನ.
ಶೈಕ್ಷಣಿಕ ಅರ್ಹತೆ :
1 ರಿಂದ 5ನೇ ತರಗತಿಗವರೆಗೆ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಮತ್ತು ಡಿ.ಇಡಿ ಪಾಸಾಗಿರಬೇಕು.
6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಬಯಸು ವವರು ಪದವಿ ಮತ್ತು ಬಿ.ಇಡಿ ಪಾಸಾಗಿರಬೇಕು. ಡಿ.ಇಡಿ, ಬಿ.ಇಡಿ/ಬಿ.ಎಸ್ಸಿ ಬಿ.ಇಡಿ ಪರೀಕ್ಷೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪದವಿ/PUCಯಲ್ಲಿ ಕನಿಷ್ಠ ಎಷ್ಟು ಅಂಕಗಳಿರಬೇಕು ಎಂಬುದೂ ಸೇರಿದಂತೆ ವಿದ್ಯಾರ್ಹತೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಇದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ: www.schooleducation.kar.nic.in/cacellpdfs/TET-2022/2_KARTET2022_NOTIFICA...
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ನಿಗದಿತ ಶುಲ್ಕವನ್ನೂ ಆನ್‌ಲೈನ್ ಮೂಲಕವೇ ಪಾವತಿಸಬೇಕು.
http://www.schooleducation.kar.nic.in ಈ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು. ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿಯ ಜೊತೆಗೆ, ಅಭ್ಯರ್ಥಿಯು ಸಹಿ ಹಾಕಿದ ಇತ್ತೀಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು. ಅಂಗವಿಕಲ ಕೋಟಾದಡಿ ವಿನಾಯಿತಿ ಬಯಸಿದಲ್ಲಿ, ಸಂಬಂಧಿಸಿದ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಹೊಂದಿರಬೇಕು.
ಪರೀಕ್ಷಾ ಶುಲ್ಕ: ಅಧಿಸೂಚನೆ ಪ್ರಕಾರ ವಿವಿಧ ವರ್ಗಗಳಿಗೆ ಪ್ರತ್ಯೇಕವಾಗಿದೆ.
https://sts.karnataka.gov.in/TET/ ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತ ಅಧಿಸೂಚನೆಗಾಗಿ https://www.schooleducation.kar.nic.in/cacellpdfs/TET-2022/1_KARTET2022_...
ಪರೀಕ್ಷೆ ಕುರಿತ ಪೂರ್ಣ ಮಾಹಿತಿಗಾಗಿ
https://www.schooleducation.kar.nic.inಗೆ ಭೇಟಿ ನೀಡಿ.
ಜೀವಿತಾವಧಿಗೆ ಮಾನ್ಯತೆ:
ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಾತಾವಧಿಯವರಿಗೆ ಮಾನ್ಯತೆ ಹೊಂದಿರುತ್ತದೆ. ಒಂದು ಬಾರಿ ಅರ್ಹತೆ ಪಡೆದವರು ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಹೆಚ್ಚು ಅಂಕ ಪಡೆಯಬೇಕಿದ್ದರೆ ಮಾತ್ರ ಅಂತಹ ಅಭ್ಯರ್ಥಿಗಳು ಪರೀಕ್ಷೆ ಬರೆಯಬಹುದು.