-->
ಉದ್ಯಮಿ ಪುತ್ರನ ಕಿಡ್ನ್ಯಾಪ್ ಮಾಡಿ 1ಕೋಟಿ ರೂ., 15 ಕೆಜಿ ಚಿನ್ನಕ್ಕೆ ಬೇಡಿಕೆ ಇಟ್ಟ ಆರೋಪಿಗಳು: ಮುಂದಾಗಿದ್ದೇ ಬೇರೆ

ಉದ್ಯಮಿ ಪುತ್ರನ ಕಿಡ್ನ್ಯಾಪ್ ಮಾಡಿ 1ಕೋಟಿ ರೂ., 15 ಕೆಜಿ ಚಿನ್ನಕ್ಕೆ ಬೇಡಿಕೆ ಇಟ್ಟ ಆರೋಪಿಗಳು: ಮುಂದಾಗಿದ್ದೇ ಬೇರೆ

ಬೆಂಗಳೂರು: ಉದ್ಯಮಿ ಪುತ್ರನೋರ್ವನನ್ನು ಅಪಹರಿಸಿರುವ ಆರೋಪಿಗಳಿಬ್ಬರು 1 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದಾರೆ. ಆದರೆ ಆರೋಪಿಗಳಿಬ್ಬರು ಪೊಲೀಸರ ಕೈಗೆ ಸಿಕ್ಕಿಬೀಳುವ ಮೂಲಕ ಎರಡು ದಿನಗಳ ಹಿಂದೆ ನಡೆದಿದ್ದ ಈ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ.

ಆನಂದ್ ಮತ್ತು ಅಜ್ಗರ್ ಪಾಷಾ ಬಂಧಿತ ಆರೋಪಿಗಳು.

ಫರ್ನಿಚರ್ ಇಂಡಸ್ಟ್ರೀಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ವಿಕಾಸ್ ಬೋರ ಎಂಬವರನ್ನು ಅಪಹರಿಸಿದ್ದ ಆರೋಪಿಗಳು, ಅವರ ತಂದೆ ಮಹೇಂದ್ರ ಕುಮಾರ್‌ಗೆ ಕರೆ ಮಾಡಿ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ವಿಜಯನಗರ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.  

ಸೆ.23 ರಂದು ಆರೋಪಿಗಳು ವಿಕಾಸ್ ಬೋರ ಅವರನ್ನು ಅಪಹರಿಸಿದ್ದರು.‌ ಬಳಿಕ ಮಹೇಂದ್ರ ಕುಮಾರ್‌ಗೆ ಕರೆ ಮಾಡಿರುವ ಆರೋಪಿಗಳು ನಿಮ್ಮ ಪುತ್ರನನ್ನು ಕಿಡ್ರಾಪ್ ಮಾಡಿದ್ದೇವೆ. ಆತನನ್ನು ಜೀವ ಸಹಿತ ಬಿಡಬೇಕಾದರೆ 1 ಕೋಟಿ ರೂ. ಜತೆಗೆ 15 ಕೆಜಿ ಚಿನ್ನ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧದ ಪೊಲೀಸ್ ದೂರು ದಾಖಲು‌ ಮಾಡಲಾಗಿತ್ತು. ಇದರನ್ವಯ ಪಶ್ಚಿಮ ವಿಭಾಗದ ಡಿಸಿಪಿ ವಿಶೇಷ ತಂಡ ರಚಿಸಿದ್ದು , ವಿಜಯನಗರ , ಮಾಗಡಿ ರೋಡ್ , ಕಾಮಾಕ್ಷಿ ಪಾಳ್ಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಅಪಹರಣಕ್ಕೆ ಆನಂದ್ ಮತ್ತು ಅರ್ಜಿತ್ ಎಂಬಿಬ್ಬರು ಆರೋಪಿಗಳು ಸುಪಾರಿ ನೀಡಿದ್ದು , ತನ್ವೀರ್ ಸುಪಾರಿ ಪಡೆದಿದ್ದ. ಒತ್ತೆ ಹಣ ಪಡೆದುಕೊಳ್ಳಲು ಆನಂದ್ ಮತ್ತು ತನ್ವೀರ್ ತಂಡದ ಅಜ್ಗರ್ ಬಂದಿದ್ದಾಗ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಪೊಲೀಸರು ಅಪಹರಣಕ್ಕೆ ಬಳಸಿಕೊಂಡಿರುವ ಕಾರು ಹಾಗೂ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಆರು ಮಂದಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article