ಕಿತ್ತಳೆ ಹಣ್ಣು ಆಮದು ಸೋಗಿನಲ್ಲಿ ಮಾದಕವಸ್ತು ಆಮದು: ಬರೋಬ್ಬರಿ 1,470 ಕೋಟಿ ರೂ. ಡ್ರಗ್ಸ್ ವಶಕ್ಕೆ
Wednesday, October 5, 2022
ಮುಂಬೈ: ಕಿತ್ತಳೆ ಹಣ್ಣು ಆಮದು ಮಾಡುವ ಸೋಗಿನಲ್ಲಿ ಬರೋಬ್ಬರಿ 1,470 ಕೋಟಿ ರೂ. ಡ್ರಗ್ಸ್ ಅನ್ನು ಆಮದು ಮಾಡಿರುವ ಕೇರಳ ಮೂಲದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಎರ್ನಾಕುಲಂನ ಕಾಲಡಿ ಎಂಬಲ್ಲಿನ ವಿಜಿನ್ ವರ್ಗೀಸ್ ಬಂಧಿತ ಆರೋಪಿ. ಈ ಡ್ರಗ್ ಪೆಡ್ಲರ್ ವಾಣಿಜ್ಯ ನಗರಿ ಮುಂಬೈನ ವಾಶಿಯಲ್ಲಿರು ಯಾಮಿಟ್ರೊ ಇಂಟರ್‌ನ್ಯಾಶನಲ್ ಫುಡ್‌ನ ವ್ಯವಸ್ಥಾಪಕ ನಿರ್ದೇಶಕ. ಡ್ರಗ್ಸ್ ಆಮದು ಮಾಡಿಕೊಳ್ಳುತ್ತಿದ್ದ ಆರೋಪದಲ್ಲಿ ವಿಜಿನ್ ವರ್ಗೀಸ್ ನನ್ನು ಡೈರೆಕ್ಟರ್ ಆಫ್ ರೆವಿನ್ಯೂ ಇಂಟಿಲಿಜೆನ್ಸ್ ( ಡಿಆ ಐ ) ಅಧಿಕಾರಿಗಳು ಬಂಧಿಸಿದ್ದಾರೆ. ಇದು ದೇಶದ ಅತಿ ದೊಡ್ಡ ಡ್ರಗ್ಸ್ ಬೇಟೆಗಳಲ್ಲಿ ಒಂದಾಗಿದೆ ಎಂದು ಡಿಆರ್‌ಐ ಹೇಳಿದೆ.
ಸೆ .30ರಂದು 1,470 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಟ್ರಕ್ ಒಂದರಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂದು ಮಾಹಿತಿ ತಿಳಿದು ದಾಳಿ ನಡೆಸಿದ ಡಿಆರ್‌ಐ ಅಧಿಕಾರಿಗಳು 198 ಕೆಜಿ ಮೆಥಾಂಫೆಟಮೈನ್ ಮತ್ತು 9 ಕೆಜಿ ಕೊಕೇನ್ ಅನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ. ವಿಜಿನ್ ವರ್ಗಿಸ್ ಕಿತ್ತಳೆ ಹಣ್ಣಿನ ಪೆಟ್ಟಿಗೆಗಳಲ್ಲಿ ಬಚ್ಚಿಟ್ಟು ಡ್ರಗ್ಸ್ ಅನ್ನು ಸಾಗಾಟ ಮಾಡುತ್ತಿದ್ದ.
ಆರೋಪಿ ವಿಜಿನ್ ವರ್ಗೀಸ್ ಗೆ ಸಂಬಂಧಿಸಿರುವ ಕಂಪೆನಿ, ಗೋದಾಮು ಮತ್ತು ಕೋಲ್ಡ್ ಸ್ಟೋರೇಜ್ ಸೌಲಭ್ಯಗಳು ಕೇರಳದ ಕಾಲಡಿಯಲ್ಲಿದೆ. ವರ್ಗೀಸ್ ಕಂಪೆನಿಯ ಹೆಸರಿನಲ್ಲೇ ಡ್ರಗ್ಸ್ ಅನ್ನು ಸಾಗಾಟ ಮಾಡಲಾಗುತ್ತಿತ್ತು. ಆದರೆ, ಕಿತ್ತಳೆ ಹಣ್ಣಿನ ಆಮದು ಎಂಬುದು ದಾಖಲೆಗಳಲ್ಲಿ ಸ್ಪಷ್ಟವಾಗಿತ್ತು. ಇದೀಗ ಮೋರ್ ಫ್ರೆಶ್ ಎಕ್ಸ್‌ಪೋರ್ಟ್‌ನ ಮಾಲಕ ಹಾಗೂ ವಿಜಿನ್ ಪಾಲುದಾರ ಮಂಜೂರ್ ತಚಂಪರಂಬು ಎಂಬಾತನನ್ನು ಡಿಆರ್‌ಐ ಹುಡುಕುತ್ತಿದೆ.
ಬರುತ್ತಿದ್ದ ಲಾಭದಲ್ಲಿ 70 % ವಿಜಿನ್‌ಗೆ ಮತ್ತು 30 % ಮಂಜೂರಿಗೆ ಎಂದು ಇಬ್ಬರ ನಡುವೆ ಒಪ್ಪಂದವಾಗಿತ್ತು ಎಂ ಡಿಆರ್ ಐ ತಿಳಿಸಿದೆ. ವರ್ಗೀಸ್ ಕಂಪೆನಿ ಈ ಹಿಂದೆ ಮಾಸ್ಕ್‌ಗಳನ್ನು ಸಹ ಆಮದು ಮಾಡಿಕೊಂಡಿದ್ದು , ಈ ಸಮಯದಲ್ಲೂ ಮಾದಕ ವಸ್ತುಗಳ ಸಾಗಾಟ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.