18ರ ಯುವತಿಗೂ 78ರ ತಾತನಿಗೂ ಮದುವೆ: ಈ ಜೋಡಿಯ ನಡುವೆ 60 ವರ್ಷಗಳ ಅಂತರವಿದ್ದರೂ ಪ್ರೀತಿಗಿದು ಅಡ್ಡಿಯಾಗಿಲ್ಲ
Thursday, October 6, 2022
ತನ್ನ 15ನೇ ವಯಸ್ಸಿಗೆ ಪ್ರೀತಿಯ ಬಲೆಗೆ ಬಿದ್ದ ಯುವತಿಯೋರ್ವಳು, ತನ್ನ 18ನೇ ವಯಸ್ಸಿಗೆ 78ರ ತಾತನನ್ನು ವಿವಾಹವಾಗಿದ್ದಾಳೆ. ಈ ಮೂಲಕ ಈ ಜೋಡಿ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎಂದು ಸಾಬೀತುಪಡಿಸಿದೆ.
78 ವರ್ಷದ ನಿವೃತ್ತ ರೈತನಾಗಿದ್ದ ತಾತನನ್ನು 3 ವರ್ಷಗಳ ಕಾಲ ಪ್ರೀತಿಸಿದ ಈ ಯುವತಿ 18ವರ್ಷ ತುಂಬಿದ ಬಳಿಕ ಮದುವೆಯಾಗಿದ್ದಾಳೆ. ಮದುವೆಗೂ ಮುಂಚೆ ಆ ತಾತನೊಂದಿಗೆ ಮೂರು ವರುಷ ಪ್ರೀತಿಯ ಬಲೆಗೆ ಬಿದ್ದಿದ್ದಳು. ಅಂದ್ರೆ ಆಕೆಗೆ ಆಗ ಇನ್ನೂ 15 ವಯಸ್ಸಿದ್ದಾಗಲೇ ಅಜ್ಜನ ಲವ್ನಲ್ಲಿ ಬಿದ್ದಿದ್ದ ಯುವತಿ ಇದೀಗ ಅಧಿಕೃತವಾಗಿ ಹಸೆಮಣೆ ಏರಿದ್ದಾಳೆ.
18 ವರ್ಷದ ಹಲೀಮಾ ಅಬ್ದುಲ್ಲಾ ಹಾಗೂ 78ರ ರಶಾದ್ ಮಂಗಾಕೋಪ್ ಪರಸ್ಪರ ಪ್ರೀತಿಸಿ ಇಷ್ಟಪಟ್ಟು ಇಸ್ಲಾಮಿಕ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಇಬ್ಬರ ಕುಟುಂಬಗಳು ಸಹ ಅವರ ಸಂಬಂಧಕ್ಕೆ, ಮದುವೆಗೆ ಒಪ್ಪಿಕೊಂಡಿದೆ. ಸದ್ಯ ಈ ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಆಚ್ಚರಿಗೊಂಡಿದ್ದಾರೆ.
ಫಿಲಿಪೈನ್ಸ್ ನಿವಾಸಿಯಾಗಿರುವ ರಶಾದ್ ಹಾಗೂ ಹಲೀಮಾ ಜೋಡಿ ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದ ಒಂದು ಡಿನ್ನರ್ ಪಾರ್ಟಿಯಲ್ಲಿ ಮೊದಲು ಭೇಟಿಯಾದ್ದಾರೆ. ಅಲ್ಲಿಂದ ಪರಿಚಯವಾಗಿ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಲು ಆರಂಭಿಸುತ್ತಾರೆ. ಇದೀಗ ಹಲೀಮಾಗೆ 18 ವರ್ಷ ತುಂಬಿದ ಕೂಡಲೇ ಇಬ್ಬರೂ ಸತಿಪತಿಗಳಾಗಿದ್ದಾರೆ.
ರಶಾದ್ಗೆ 78 ವಯಸ್ಸು ಆಗಿದೆ ಅಂದ್ರೆ, ಹೆಂಡ್ತಿ, ಮೊಮ್ಮಕ್ಕಳು ಇರ್ತಾರೆ ಎನ್ನುವುದು ಸಹಜ. ಆದ್ರೆ, ರಶೀದ್ ಬಹುಪತ್ನಿ ವಲ್ಲಭನಲ್ಲ. ಈಗನಿಗೂ ಇದು ಮೊದಲ ಮದುವೆ. ಈತನಿಗೆ ಬೇರೆ ಪ್ರೇಯಸಿಯರೂ ಇಲ್ಲ. ಹೀಗಾಗಿ, ಹಲೀಮಾನೇ ಇವನ ಫಸ್ಟ್ ಲವ್ ಮತ್ತು ಫಸ್ಟ್ ಹೆಂಡತಿ ಎನ್ನುವುದು ವಿಶೇಷ.