ಶಾಲಾ ವಿಜ್ಞಾನ ಮೇಳ ನಡೆಯುತ್ತಿದ್ದ ವೇಳೆ ಏಕಾಏಕಿ ಪೆಂಡಾಲ್ ಕುಸಿದು ಹಲವು ವಿದ್ಯಾರ್ಥಿಗಳಿಗೆ ಗಾಯ
Friday, October 21, 2022
ಕಾಸರಗೋಡು: ಶಾಲೆಯಲ್ಲಿ ವಿಜ್ಞಾನ ಮೇಳ ನಡೆಯುತ್ತಿದ್ದ ವೇಳೆಯೇ ಚಪ್ಪರ ಏಕಾಏಕಿ ಕುಸಿದು 200ಕ್ಕೂ ಅಧಿಕ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರಲ್ಲಿ ಹಲವರು ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಬೇಕೂರು ಎಂಬಲ್ಲಿ ಸಂಭವಿಸಿದೆ.
ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಮೂರು ದಿನಗಳ ವಿಜ್ಞಾನ ಮೇಳ ಆಯೋಜನೆಗೊಂಡಿತ್ತು. ಎರಡನೇ ದಿನವಾದ ಇಂದು ಮಧ್ಯಾಹ್ನ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಧ್ಯಹ್ನ ವೇಳೆಗೆ ತಗಡು ಶೀಟು ಅಳವಡಿಸಲಾಗಿದ್ದ ಚಪ್ಪರ ಏಕಾಏಕಿ ಕುಸಿದಿ ಧರಾಶಾಯಿಯಾಗಿದೆ. ಪರಿಣಾಮ ಇದರಡಿ ಸಿಲುಕಿದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಚಪ್ಪರದಡಿ ಸಿಲುಕಿದ್ದಾರೆ. ಇವರಲ್ಲಿ ಹಲವರು ಗಾಯಗೊಂಡಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅವಘಡದಲ್ಲಿ ಕೆಲ ಶಿಕ್ಷಕರು ಹಾಗೂ ತೀರ್ಪುಗಾರರಿಗೂ ಗಾಯವಾಗಿದೆ ಎಂದು ತಿಳಿದು ಬಂದಿದೆ.