-->
ಹತ್ತನೇ ತರಗತಿ ಓದುತ್ತಿದ್ದಾಗ ಪುತ್ತೂರಿನ ಈ ಬಾಲಕ ರಚಿಸಿದ ಆಂಗ್ಲ ಕವನ ಇದೀಗ 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರ್ಪಡೆ..!!

ಹತ್ತನೇ ತರಗತಿ ಓದುತ್ತಿದ್ದಾಗ ಪುತ್ತೂರಿನ ಈ ಬಾಲಕ ರಚಿಸಿದ ಆಂಗ್ಲ ಕವನ ಇದೀಗ 8ನೇ ತರಗತಿಯ ಪಠ್ಯಪುಸ್ತಕದಲ್ಲಿ ಸೇರ್ಪಡೆ..!!


ಪುತ್ತೂರು: ಬಾಲಕನೊಬ್ಬ ಹತ್ತನೇ ತರಗತಿ ಓದುತ್ತಿರುವಾಗ ರಚಿಸಿದ ಆಂಗ್ಲ ಕವನ ಇದೀಗ 8ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.

ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ದಿವಿತ್​ ಯು. ರೈ ಎಂಬುವವರು ಈ ಆಂಗ್ಲ ಕವನ ರಚಿಸಿದ ಬಾಲಕ.ಈತ‌ 
ಉದಯ ಕುಮಾರ್​ ರೈ ನೀಲಂಪಾಡಿ ಮತ್ತು ಪ್ರತಿಮಾ ಯು.ರೈ ದಂಪತಿ ಪುತ್ರ.

 ಸದ್ಯ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ​ವಿದ್ಯಾರ್ಥಿ. 4 ವರ್ಷದ ಹಿಂದೆ ಅಂದರೆ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವಾಗ ದಿವಿತ್​ ರಚನೆಯ 'ಸಿಂಪಲ್​ ಲೈಫ್​' ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಯಾಗಿತ್ತು. ಆ ಕೃತಿಯ 'ಮದರ್​ ಅರ್ಥ್​' ಕವನವನ್ನು ರಾಜ್ಯ ಸರ್ಕಾರ ಈ ಬಾರಿಯ 8ನೇ ತರಗತಿಯ ಕಲಿಕಾ ಚೇತರಿಕೆ ಪಠ್ಯದಲ್ಲಿ ಅಳವಡಿಸಿದೆ.

ದಿವಿತ್​ ಪುತ್ತೂರಿನ ಹಾರಾಡಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದ ವೇಳೆ 'ಡ್ಯೂ ಡ್ರಾಪ್ಸ್​' ಎಂಬ ಆಂಗ್ಲ ಕವನ ಸಂಕಲನ ರಚಿಸಿ ಬಿಡುಗಡೆಗೊಳಿಸಿದ್ದರು.


Ads on article

Advertise in articles 1

advertising articles 2

Advertise under the article