-->
ನವೆಂಬರ್ ತಿಂಗಳಲ್ಲಿ ಹೆಚ್ಚು ಅದೃಷ್ಟವನ್ನು ಹೊಂದಿರುವ ರಾಶಿಗಳು ಯಾವುದೆಲ್ಲ ಎಂದು ನೀವೇ ನೋಡಿ..!ಇವರಿಗೆ ಇನ್ನು ಹಣದ ಸುರಿಮಳೆ..!!

ನವೆಂಬರ್ ತಿಂಗಳಲ್ಲಿ ಹೆಚ್ಚು ಅದೃಷ್ಟವನ್ನು ಹೊಂದಿರುವ ರಾಶಿಗಳು ಯಾವುದೆಲ್ಲ ಎಂದು ನೀವೇ ನೋಡಿ..!ಇವರಿಗೆ ಇನ್ನು ಹಣದ ಸುರಿಮಳೆ..!!


ವೃಷಭ ರಾಶಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಉದ್ಯೋಗದಲ್ಲಿ ಬದಲಾವಣೆ ಬಯಸುತ್ತಿರುವ ವೃಷಭ ರಾಶಿಯವರಿಗೆ ಈ ತಿಂಗಳು ಶುಭ ಸುದ್ದಿ ಸಿಗಬಹುದು. ದೊಡ್ಡ ಕಂಪನಿಯಲ್ಲಿ ಅವಕಾಶ ಸಿಗುವ ಸಾಧ್ಯ್ಯತೆ ಇದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಲಿದೆ. 


ಮಿಥುನ ರಾಶಿ:  
ನವೆಂಬರ್ ತಿಂಗಳು ಮಿಥುನ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದ್ದು ಹಲವು ರೀತಿಯಲ್ಲಿ ಲಾಭವನ್ನು ನೀಡುತ್ತದೆ. ಈ ಸಮಯದಲ್ಲಿ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಕೋಪವನ್ನು ತಪ್ಪಿಸಿ. ವಿದೇಶ ಪ್ರಯಾಣ ಇರಬಹುದು. 

ಕರ್ಕಾಟಕ ರಾಶಿ: 
ನವೆಂಬರ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಬಹುದು. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆದಾಯ ಹೆಚ್ಚಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುವಿರಿ. 

ಕನ್ಯಾ ರಾಶಿ: 
ಈ ಸಮಯದಲ್ಲಿ ನೀವು ನೀವು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ. ವ್ಯಾಪಾರ-ವ್ಯವಹಾರಗಳು ವೃದ್ಧಿಯಾಗಲಿದೆ. ಪೂರ್ಣ ಉತ್ಸಾಹದಿಂದ ಕೆಲಸ ಮಾಡಿ, ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಇದ್ದೇ ಇರುತ್ತದೆ. ನಿಮ್ಮ ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲು ಸ್ನೇಹಿತರು ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. 



ತುಲಾ ರಾಶಿ: 
ಈ ಸಮಯದಲ್ಲಿ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮವಿಶ್ವಾಸ ಹೇರಳವಾಗಿರುತ್ತದೆ. ಈ ಕಾರಣದಿಂದಾಗಿ, ಎಲ್ಲಾ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ವೃತ್ತಿ ಜೀವನದಲ್ಲಿ ನೀವು ಕಂಡ ಕನಸು ನನಸಾಗಲಿದೆ. ಆದರೆ, ಕೋಪದ ಕೈಗೆ ಬುದ್ದಿ ಕೊಡದಿರಿ. 


ಧನು ರಾಶಿ:
ತಾಳ್ಮೆಯಿಂದ ಕೆಲಸ ಮಾಡಿ, ನೀವು ಕೈ ಹಾಕಿದ ಪ್ರತಿ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಆಡಳಿತದಿಂದ ನೆರವು ನೀಡಲಾಗುವುದು. ಕುಟುಂಬದಲ್ಲಿ ಸಂತೋಷ ಇರುತ್ತದೆ. ಕೌಟುಂಬಿಕ ಪ್ರವಾಸಕ್ಕೆ ಹೋಗಬಹುದು. 



ಕುಂಭ ರಾಶಿ:
ನವೆಂಬರ್ ತಿಂಗಳಲ್ಲಿ ಕುಂಭ ರಾಶಿಯವರಿಗೆ ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ. ಕೆಲಸದ ವ್ಯಾಪ್ತಿ ವಿಸ್ತಾರವಾಗಲಿದೆ. ಆದಾಯ ಹೆಚ್ಚಲಿದೆ. ಜವಾಬ್ದಾರಿಗಳು ಹೆಚ್ಚಾಗಲಿವೆ. 

Ads on article

Advertise in articles 1

advertising articles 2

Advertise under the article