ವೈದ್ಯಕೀಯ ವಿದ್ಯಾರ್ಥಿನಿಯ ವ್ಯಥೆಯ ಕಥೆ!- ಹುಡುಗನ ಅರಸಿ ಬಂದ ಈಕೆ ಚಿನ್ನಾಭರಣ ಮಾರಾಟಕ್ಕೆ ಮುಂದಾಗಿದ್ದು ಯಾಕೆ...?
ವೈದ್ಯಕೀಯ ವಿದ್ಯಾರ್ಥಿನಿಯ ವ್ಯಥೆಯ ಕಥೆ!- ಹುಡುಗನ ಅರಸಿ ಬಂದ ಈಕೆ ಚಿನ್ನಾಭರಣ ಮಾರಾಟಕ್ಕೆ ಮುಂದಾಗಿದ್ದು ಯಾಕೆ...?
MBBS ಕಲಿಯುತ್ತಿರುವ ವಿದ್ಯಾರ್ಥಿನಿಯ ವಿಷಾದದ ಕಥೆ. ಚೆನ್ನೈನಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ವಿದ್ಯಾರ್ಥಿನಿ ಮಂಗಳೂರಿನ ಸುರತ್ಕಲ್‌ನಲ್ಲಿ ವಂಚನೆಗೊಳಗಾಗಿ ತನ್ನ ಚಿನ್ನಾಭರಣವನ್ನೇ ಮಾರಲು ಹೊರಟಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಒಬ್ಬ ಎಂಜಿನಿಯರ್ ವಿದ್ಯಾರ್ಥಿಯನ್ನು ಹುಡುಕಿಕೊಂಡು ಆಕೆ ಮಂಗಳೂರಿನ ಸುರತ್ಕಲ್‌ಗೆ ಆಗಮಿಸಿದ್ದಳು. ಈ ಸಂದರ್ಭದಲ್ಲಿ ಆಕೆಯ ಪರ್ಸ್, ಮೊಬೈಲನ್ನು ಯಾರೋ ಏಮಾರಿಸಿ ಕಳವು ಮಾಡಿದ್ದರು. ಇದರಿಂದ ಅಸಹಾಯಕ ಸ್ಥಿತಿಗೆ ತಲುಪಿದ ಆಕೆ ದಿಕ್ಕೇ ಕಾಣದಾಗಿದ್ದಳು.
ಈ ವಿದ್ಯಾರ್ಥಿನಿಯನ್ನು ರಾಜಸ್ಥಾನ ಮೂಲದ ರೇಶು ಎಂದು ಗುರುತಿಸಲಾಗಿದೆ. ಈಕೆ ಚೆನ್ನೈನಲ್ಲಿ ಎಂಬಿಬಿಎಸ್ ಓದುತ್ತಿದ್ದು ಸುರತ್ಕಲ್ ಎಂಜಿನಿಯರಿಂಗ್ ಕಾಲೇಜ್ ಹುಡುಗನಿಗಾಗಿ ಅರಸಿ ಸುರತ್ಕಲ್‌ಗೆ ಬಂದಿದ್ದಳು.
ಆದರೆ ಇಲ್ಲಿಗೆ ತಲುಪುವ ಮೊದಲೇ ಬ್ಯಾಗ್, ಮೊಬೈಲ್ ಒಳಗಾಗಿದ್ದು ಕೊನೆಗೆ ಏನೂ ತೋಚದಾಗಿದ್ದಳು. ಕೊನೆಗೆ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ಕೈಯ್ಯಲ್ಲಿ ದುಡ್ಡಿಲ್ಲದೆ ತನ್ನಲ್ಲಿದ್ದ ಚಿನ್ನ ಮಾರಲು ಮುಂದಾಗಿದ್ದಳು.
ಈ ಬಗ್ಗೆ ಸ್ಥಳೀಯರಲ್ಲಿ ಚಿನ್ನದ ಅಂಗಡಿ ಕುರಿತು ಪ್ರಶ್ನೆ ಮಾಡಿದ್ದಳು. ಯುವತಿಯ ಬಗ್ಗೆ ಸಂಶಯ ಮೂಡಿದಾಗ ಸ್ಥಳೀಯ ಸಮಾಜ ಸೇವಾ ಸಂಸ್ಥೆಯ ಉಮೇಶ್ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ, ಕೇಶವ, ನಾಗೇಶ್ ಕಾನಾ ಅವರು ವಿಚಾರಿಸಿದ್ದಾರೆ. ಆಗಿರುವ ಸಂಗತಿ ಬಗ್ಗೆ ವಿದ್ಯಾರ್ಥಿನಿ ವಿವರಿಸಿದ್ದಾಳೆ.
ಬಳಿಕ ಸ್ಥಳೀಯರು ಆಕೆಯನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆತಂದಿದ್ದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲು ನೆರವಾಗಿದ್ದಾರೆ.