Career in Police Dept : ಪೊಲೀಸ್ ಇಲಾಖೆಯಲ್ಲಿ 1591 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ
ಪೊಲೀಸ್ ಇಲಾಖೆಯಲ್ಲಿ 1591 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ
ಪೊಲೀಸ್ ಇಲಾಖೆಯಲ್ಲಿ 1591 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಆರಂಭವಾಗಿದ್ದು, ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು 1,591 ಪುರುಷ, ಮಹಿಳಾ, ತೃತೀಯ ಲಿಂಗಿ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕದ ಸಾಮಾನ್ಯ ವೃಂದದಲ್ಲಿ 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು
ಕಲ್ಯಾಣ ಕರ್ನಾಟಕ ವೃಂದದಲ್ಲಿ 454 ಹುದ್ದೆಗಳು... ಹೀಗೆ ಒಟ್ಟು 1,591 ಹುದ್ದೆಗಳು.
ಆಸಕ್ತರು ಹೆಚ್ಚಿನ ಮಾಹಿತಿಗೆ ಪೊಲೀಸ್ ಇಲಾಖೆ ಜಾಲತಾಣಕ್ಕೆ (https://ksp-recruitment.in/) ಭೇಟಿ ನೀಡಬಹುದು.
ಅರ್ಜಿ ಆನ್‌ಲೈನ್‌ನಲ್ಲಿ ಸಲ್ಲಿಕೆ ಕಡ್ಡಾಯ.
ಅರ್ಜಿ ಸಲ್ಲಿಸಲು ಕೊನೆ ದಿನ:- ನವೆಂಬರ್ 21, 2022
ಅರ್ಜಿ ಶುಲ್ಕ: OBC ಅಭ್ಯರ್ಥಿಗಳಿಗೆ Rs 400 ಹಾಗೂ SC/ST, ಪ್ರವರ್ಗ 1 ಅಭ್ಯರ್ಥಿಗಳು ₹200 ಅರ್ಜಿ ಶುಲ್ಕ ಪಾವತಿಸಬೇಕು. ಈ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ, ಯಾ ಬ್ಯಾಂಕ್ ಚಲನ್ ಮೂಲಕ ಯಾ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಪಾವತಿಸಬಹುದು.
ವೇತನ ಶ್ರೇಣಿ: ರೂ. 23,500– ರೂ.47,650 ಜೊತೆಗೆ 2006ರ ನಿಯಮದಂತೆ ಅಂಶದಾಯಿ ಪಿಂಚಣಿ ಸೌಲಭ್ಯ
ವಯೋಮಿತಿ: 19 ವರ್ಷ– ಗರಿಷ್ಠ 25 ವರ್ಷಗಳು(ವಯೋಮಿತಿಯಲ್ಲಿ ಸಡಿಲಿಕೆ ಇದೆ)
ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ, ದೈಹಿಕ ಪರೀಕ್ಷೆ ಮೂಲಕ ನೇರ ನೇಮಕಾತಿ ನಡೆಯುತ್ತದೆ.
ಬಹು ಆಯ್ಕೆಯ 100 ಅಂಕಗಳ 100 ಪ್ರಶ್ನೆಗಳ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿರುತ್ತದೆ. PUC ವರೆಗಿನ ಪಠ್ಯಕ್ರಮ ಇರಲಿದೆ. 90 ನಿಮಿಷಗಳ ಪರೀಕ್ಷಾ ಅವಧಿ ಹಾಗೂ ತಪ್ಪು ಉತ್ತರಗಳಿಗೆ ಅಂಕ ಕಡಿತಗೊಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿ ಹಾಗೂ ಪಠ್ಯ ಕ್ರಮ, ವಿಸ್ತೃತ ಅಧಿಸೂಚನೆಗಾಗಿ ಇಲಾಖೆಯ https://ksp-recruitment.in/ ವೆಬ್‌ಸೈಟ್ ಗೆ ಭೇಟಿ ನೀಡಿ.