Kadaba-ಮಹಿಳೆಯ ಮಾನಭಂಗಕ್ಕೆ ಯತ್ನ.. ಠಾಣೆಯಲ್ಲಿ ಪ್ರಕರಣ ದಾಖಲು.
Friday, October 21, 2022
ಕಡಬ
ಬಟ್ಟೆ ಮಾರುವ ಸೋಗಿನಲ್ಲಿ ಬಂದ ತಂಡವೊಂದು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದ ಘಟನೆ ಕಡಬದ ಕಾಣಿಯೂರು ಸಮೀಪದ ದೋಳ್ಪಾಡಿ ಎಂಬಲ್ಲಿ ಅ.20 ರಂದು ನಡೆದಿದೆ.
ಮಹಿಳೆ ಕಿರುಚಾಡಿದ ವೇಳೆ ಬಂದಿದ್ದವರು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಆರೋಪಿಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೊಳಲಿಯ ಅಡ್ಡೂರು ನಿವಾಸಿಗಳಾದ ರಫೀಕ್ , ರಮೀಯಾಸುದ್ದಿನ್ ಅಪಘಾತದಲ್ಲಿ ಗಾಯಗೊಂಡವರು. ಇವರ ವಿರುದ್ದ ದೋಳ್ಪಾಡಿಯ ಸಂತ್ರಸ್ತ ಮಹಿಳೆ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ದೂರು ನೀಡಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಾಯಗೊಂಡಿರುವ ಆರೋಪಿಗಳು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಚಿಕಿತ್ಸೆ ಮುಂದುವರಿದಿದೆ.
ಗ್ರಾಮಸ್ಥರ ಮಾಹಿತಿ ಪ್ರಕಾರ, ಮನೆ ಮನೆಗೆ ಬಟ್ಟೆ ಮಾರುವುದಾಗಿ ಹೇಳಿಕೊಂಡು ಕಾಣಿಯೂರಿಗೆ ಬಂದಿದ್ದಾರೆ. ಅಲ್ಲಿಂದ ಹಲವು ಮನೆಗಳಿಗೆ ಅವರು ಬೇಟಿ ನೀಡಿದ್ದು , ಇದೆ ರೀತಿ ದೋಳ್ಪಾಡಿ ಗ್ರಾಮಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಬಟ್ಟೆ ಮಾರುವ ನೆಪದಲ್ಲಿ ಮನೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಮಹಿಳೆಯೊಬ್ಬರೆ ಇದ್ದರು. ತಂಡದ ಸದಸ್ಯನೊಬ್ಬ ಈ ಮಹಿಳೆಯ ಮೈ ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು ಕೂಡಲೇ ಆರೋಪಿಗಳು ತಾವು ಬಂದಿದ್ದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಮಹಿಳೆ ಕಿರುಚಿದ ಸದ್ದು ಕೇಳಿದ ಸ್ಥಳೀಯರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಆದರೇ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಮೊದಲು ದೋಳ್ಪಾಡಿಯಿಂದ ಪುಣ್ಚತ್ತಾರಿಗೆ ಬಂದು ಅಲ್ಲಿ ಜನ ಅಡ್ಡ ನಿಂತಿರುವುದನ್ನು ಕಂಡು ಅಲ್ಲಿಂದ ಮತ್ತೆ ತಿರುಗಿ ಚಾರ್ವಾಕ ಮೂಲಕ ಸಾರಿದ್ದಾರೆ.
ಆಗ ಸ್ಕೂಟರಲ್ಲಿ ಹೋಗುತಿದ್ದ ಮಹಿಳೆಯೊಬ್ಬರಿಗೆ ಅಪಘಾತವಾಗುವುದು ಸ್ವಲ್ಪದರಲ್ಲಿ ತಪ್ಪಿದೆ.
ನಂತರ ಚಾರ್ವಾಕದಲ್ಲಿ ಜೀಪೊಂದಕ್ಕೆ ಗುದ್ದಿಕೊಂಡು ವೇಗವಾಗಿ ಸಾಗಿದ ಕಾರು ಕಾಣಿಯೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಫಘಾತ ಸಂಭವಿಸಿದೆ.
ಸಂತ್ರಸ್ತ ಮಹಿಳೆ ಹಿಂದೂ ಧರ್ಮಿಯರಾಗಿದ್ದು, ಸ್ಥಳದಲ್ಲಿ ತುಸು ಸಮಯ ಬಿಗುವಿನ ವಾತವರಣ ಸೃಷ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಗಾಯಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.