
ಚಾಣಕ್ಯನ ನೀತಿ ಪ್ರಕಾರ ಪುರುಷರು ಯಾವ ಕಾರಣಕ್ಕೂ ತನ್ನ ಹೆಂಡತಿ ಜೊತೆ ಈ ವಿಷಯಗಳನ್ನು ಹೇಳಿಕೊಳ್ಳಲೇಬಾರದು...!!
Monday, October 31, 2022
ಚಾಣಕ್ಯ ನೀತಿಯ ಪ್ರಕಾರ, ಒಬ್ಬನು ವ್ಯಕ್ತಿ ತನ್ನ ದೌರ್ಬಲ್ಯವನ್ನು ಯಾರಿಗೂ ಬಹಿರಂಗಪಡಿಸಬಾರದು. ಏಕೆಂದರೆ ಅನೇಕ ಬಾರಿ ಅದು ವ್ಯಕ್ತಿಗೆಯೇ ಮುಳುವಾಗುವ ಸಾಧ್ಯತೆ ಇರುತ್ತದೆ ಮತ್ತು ಆ ಸಮಯದಲ್ಲಿ ವ್ಯಕ್ತಿಗೆ ಎದುರಿಗೆ ಇರುವವರು ಆತನ ದೌರ್ಬಲ್ಯದ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಾರೆ.
ಯಾವುದೇ ಓರ್ವ ವ್ಯಕ್ತಿ ದಾನ ಮಾಡಿದರೆ, ಅದನ್ನು ಆತ ರಹಸ್ಯವಾಗಿಡಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ನೀವು ಮಾಡಿದ ಯಾವುದೇ ದಾನವನ್ನು ಎಂದಿಗೂ ಪ್ರಚಾರ ಮಾಡಬಾರದು. ಅಷ್ಟೇ ಯಾಕೆ ದಾನದ ಬಗ್ಗೆ ಪತ್ನಿಗೂ ಕೂಡ ಹೇಳಬಾರದು.
ನಿಮ್ಮ ಗಳಿಕೆಯ ಎಲ್ಲಾ ಮಾಹಿತಿಯನ್ನು ನಿಮ್ಮ ಹೆಂಡತಿಗೆ ಎಂದಿಗೂ ನೀಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ನಿಮ್ಮ ಆದಾಯದ ಎಲ್ಲಾ ಮೂಲಗಳ ಬಗ್ಗೆ ಹೆಂಡತಿಗೆ ತಿಳಿದಿದ್ದರೆ, ಅವಳು ನಿಮಗೆ ಎಲ್ಲಾ ಹಣವನ್ನು ನೀಡುವಂತೆ ಒತ್ತಾಯಿಸಬಹುದು.