-->

ಅತ್ಯಾಚಾರದಿಂದ ಗರ್ಭಿಣಿಯಾದ ಬಾಲಕಿಗೆ ಬೆಂಕಿ ಹಚ್ಚಿದ ತಾಯಿ, ಸೋದರಿ

ಅತ್ಯಾಚಾರದಿಂದ ಗರ್ಭಿಣಿಯಾದ ಬಾಲಕಿಗೆ ಬೆಂಕಿ ಹಚ್ಚಿದ ತಾಯಿ, ಸೋದರಿ

ಮೈನ್‌ಪುರಿ ( ಉತ್ತರಪ್ರದೇಶ): ಕಳೆದ ಮೂರು ಮೂರು ತಿಂಗಳ ಹಿಂದೆ ಯುವಕನೋರ್ವನಿಂದ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದ 15 ವರ್ಷದ ಅಪ್ರಾಪ್ತೆಗೆ ಆಕೆಯ ಹೆತ್ತತಾಯಿ ಹಾಗೂ ಸೋದರಿಯೇ ಬೆಂಕಿ ಹಚ್ಚಿರುವ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬಾಲಕಿ ಗರ್ಭಿಣಿ ಎಂದು ತಿಳಿದ್ದಂತೆ ಆಕೆಯ ತಾಯಿ ಹಾಗೂ ಸೋದರಿ ಆಕೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ತಕ್ಷಣ ನೆರೆಹೊರೆಯವರು ಗಂಭೀರ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಬಾಲಕಿಯನ್ನು ಶೈಫಾಯಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯುವಂತೆ ಶಿಫಾರಸು ಮಾಡಲಾಗಿದೆ. ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧೀಕ್ಷಕ ಕಮಲೇಶ್ ದೀಕ್ಷಿತ್ ತಿಳಿಸಿದ್ದಾರೆ. 

ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ತಾಯಿ ಬಾಲಕಿಯನ್ನು ಗುರುವಾರ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿದ್ದ ಸಂದರ್ಭ ತಪಾಸಣೆ ವೇಳೆ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿ 25 ವರ್ಷದ ಯುವಕನ ವಿರುದ್ಧ ಪೊಕ್ಸೊ ಪ್ರಕರಣ ಹಾಗೂ ಬಾಲಕಿಯ ತಾಯಿ , ಸಹೋದರಿಯ ವಿರುದ್ಧ ಹತ್ಯೆಗೆ ಯತ್ನ ಪ್ರಕರಣ ದಾಖಲಿಸಲಾಗಿದೆ.

Related Posts

Ads on article

Advertise in articles 1

advertising articles 2

Advertise under the article