ಕೋಝಿಕ್ಕೋಡ್: ಸಮುದ್ರ ತೀರದಲ್ಲಿ ಹಿಂದೆ ಸರಿದ ನೀರು; ಅಲೆಗಳಿಲ್ಲದೆ ತಟಸ್ಥವಾದ ಸಮುದ್ರ
Sunday, October 30, 2022
ಕೋಝಿಕ್ಕೋಡ್: ಕೋಝಿಕ್ಕೋಡ್‌ನಲ್ಲಿರುವ ನೈನಂವಾಲಪ್ಪು ಬೀಚ್‌ನಲ್ಲಿ ಶನಿವಾರ ಸಂಜೆ ಸಮುದ್ರವು ಅಲೆಗಳಿಲ್ಲದೆ ತಟಸ್ಥವಾಗಿ ನೀರು ಹಿಂದೆ ಸರಿದಿರುವುದಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಸದ್ಯ ಯಾವುದೇ ಸುನಾಮಿ ಎಚ್ಚರಿಕೆ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೋಝಿಕ್ಕೋಡ್ ಜಿಲ್ಲಾಧಿಕಾರಿ ನರಸಿಂಹುಗರ್ ಟಿ.ಎಲ್ . ರೆಡ್ಡಿಯವರು ಸ್ಥಳೀಯರಿಗೆ, ಸಮುದ್ರ ವಿಹಾರಿಗಳಿಗೆ ಸಮುದ್ರದ ತಳಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿರುವ ಅವರು 'ಸಮುದ್ರದ ನೀರು ಸಂಜೆ ಸುಮಾರು 30 ಮೀ. ಹಿಂದೆ ಸರಿದಿದೆ. ಬಳಿಕ, ಅದು ಕ್ರಮೇಣ 50-70 ಮೀ.ಗೆ ಇಳಿದಿದೆ. ಆದರೆ, ರಾತ್ರಿ ಸಮಯವಾಗಿರುವುದರಿಂದ, ನಾವು ಈಗ ದೂರವನ್ನು ಅಳೆಯಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.
'ಅರೇಬಿಯನ್ ಸಮುದ್ರ ಅಥವಾ ಹಿಂದೂ ಮಹಾಸಾಗರದಲ್ಲಿ ಯಾವುದೇ ಭೂಕಂಪ ಅಥವಾ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿಲ್ಲ. ಆದ್ದರಿಂದ ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ಸಮುದ್ರದ ಸಮೀಪದಲ್ಲಿ ವಾಸಿಸುವವರು ಸಮುದ್ರಕ್ಕೆ ಇಳಿಯಬಾರದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ( ಕೆಎಸ್‌ಡಿಎಂಎ ) ಪ್ರಕಟಣೆಯಲ್ಲಿ ತಿಳಿಸಿದೆ.