ಮಂಗಳೂರು: ಶಾಸಕ ಹರೀಶ್ ಪೂಂಜಾ ಮೇಲಿನ ದಾಳಿ ಕೊಲೆ ಯತ್ನವಲ್ಲ; ಎಸ್ಪಿ
Friday, October 14, 2022
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ದಾಳಿ ಪ್ರಕರಣವು ಕೊಲೆ ಯತ್ನವಲ್ಲ. ಇದು ಓವರ್ ಟೇಕ್ ಮಾಡುವ ಭರದಲ್ಲಿ ಮಾಡಿದಾಗ ನಡೆದ ಘಟನೆಯಾಗಿದೆ ಎಂದು ದ.ಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿದ್ದಾರೆ.
ದಾಳಿ ಯತ್ನದ ಹಿನ್ನೆಲೆಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿದ್ದ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಬಳಿ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಆತನ ವಿರುದ್ಧ ಈ ಹಿಂದೆಯೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುತ್ತೇವೆ ಎಂದು ಋಷಿಕೇಶ್ ಸೋನಾವಣೆ ಹೇಳಿದ್ದಾರೆ.
ಆರೋಪಿ ನಿನ್ನೆ ರಾತ್ರಿ 11 ಗಂಟೆಯ ವೇಳೆಗೆ ತನ್ನ ಕಾರಿನ ಮೇಲೆ ದಾಳಿ ನಡೆಸಿ ತಲವಾರು ಝಳಪಿಸಿದ್ದ ಎನ್ನಲಾಗಿತ್ತು. ಈ ಬಗ್ಗೆ ಹರೀಶ್ ಪೂಂಜಾ ಕಾರು ಚಾಲಕ ನವೀನ್ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.