ಮಂಗಳೂರು: ಎಸ್ಪಿ ಸ್ಪಷ್ಟನೆ ಬೆನ್ನಲ್ಲೇ ಗನ್ ಮ್ಯಾನ್ ವಾಪಾಸು ಕಳಿಸಿದ ಶಾಸಕ ಹರೀಶ್ ಪೂಂಜಾ
Friday, October 14, 2022
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರು ಮೇಲಿನ ಮೇಲೆ ದಾಳಿ ಯತ್ನ ಪ್ರಕರಣವು ಕೊಲೆಯತ್ನವಲ್ಲ. ಬದಲಾಗಿ ರೋಡ್ ರೇಜ್ ಅಷ್ಟೇ ಎಂದು ದ.ಕ ಎಸ್ಪಿ ಋಷಿಕೇಶ್ ಸೋನಾವಣೆ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಶಾಸಕ ಪೂಂಜಾ ಭದ್ರತೆಯ ದೃಷ್ಟಿಯಿಂದ ತಮಗೆ ನೀಡಿರುವ ಗನ್ ಮ್ಯಾನ್ ಅನ್ನು ವಾಪಾಸು ಕಳುಹಿಸಿದ್ದಾರೆ.
ನಿನ್ನೆ ರಾತ್ರಿ ಮಂಗಳೂರಿನಿಂದ ಬೆಳ್ತಂಗಡಿಗೆ ಹೋಗುವ ಸಂದರ್ಭ ಫರಂಗಿಪೇಟೆ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಶಾಸಕ ಹರೀಶ್ ಪೂಂಜಾ ಕಾರು ಮೇಲೆ ತಲವಾರು ಝಳಪಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಶಾಸಕರ ಕಾರು ಚಾಲಕ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಇದು ಕೊಲೆ ಯತ್ನವಲ್ಲ. ಬದಲಾಗಿ ಓವರ್ ಟೇಕ್ ಭರದಲ್ಲಿ ನಡೆದಿರುವ ಪ್ರಕರಣ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಾಣೆ ಸ್ಪಷ್ಟನೆ ನೀಡಿದ್ದರು. ಎಸ್ಪಿಯವರು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಗೃಹ ಸಚಿವರ ಸೂಚನೆಯ ಮೇರೆಗೆ ದ.ಕ.ಪೊಲೀಸ್ ಇಲಾಖೆ ನೀಡಿರಿವ ಗನ್ ಮ್ಯಾನ್ ಮ್ಯಾನ್ ನ್ನು ಶಾಸಕ ಹರೀಶ್ ಪೂಂಜಾ ವಾಪಸ್ ಕಳುಹಿಸಿದ್ದಾರೆ.