Sulya:- ಸುಳ್ಯದಲ್ಲಿ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಅಕ್ರಮ ಶಸ್ತ್ರಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು.
Wednesday, October 26, 2022
ಸುಳ್ಯ
ಪಿಸ್ತೂಲ್‌ನಿಂದ ಗುಂಡು ಹಾರಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸುಳ್ಯ ಪೊಲೀಸ್ ಉಪನಿರೀಕ್ಷಕರಾದ ದಿಲೀಪ್ ಜಿ.ಆರ್ ಅವರು ನೀಡಿದ ದೂರಿನನ್ವಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಆರೋಪಿ ಸುಳ್ಯದ ಕಸಬ ತಾಲೂಕು ಜಟ್ಟಿಪಳ್ಳ ನಿವಾಸಿಯಾದ ಕೇಶವಪ್ರಭು (60) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ದಿಲೀಪ್ ಜಿ ಆರ್ ರವರಿಗೆ ಬಂದ ಮಾಹಿತಿಯಂತೇ ಕೇಶವಪ್ರಭು ಎಂಬವರ ಮನೆಗೆ ಬಂದಾಗ ಮನೆಯಲ್ಲಿ ಕೇಶವಪ್ರಭು ಅವರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡು ಬಿದ್ದಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಮಯದಲ್ಲಿ ಗಾಯಾಳು ಕೇಶವಪ್ರಭು ಅವರ ಮನೆಯ ಹೊರಬದಿಯ ಸಿಟೌಟ್‌ನಲ್ಲಿ ಆತ್ಮಹತ್ಯೆ ಯತ್ನಕ್ಕೆ ಬಳಸಿದ ಪರವಾನಿಗೆ ರಹಿತ ನಾಡ ಪಿಸ್ತೂಲ್ ಬಿದ್ದಿರುವುದು ಕಂಡು ಬಂದಿದೆ.ತನಿಖೆಯಲ್ಲಿ ಕೇಶವಪ್ರಭು ತನ್ನ ವೈಯಕ್ತಿಕ ವಿಚಾರವಾಗಿ ಅಕ್ರಮ ನಾಡ ಪಿಸ್ತೂಲ್‌ನಿಂದ ತನ್ನ ಹಣೆಗೆ ಗುಂಡು ಹಾರಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ನಾಡ ಪಿಸ್ತೂಲ್‌ನ್ನು ತನ್ನ ಬಳಿಯಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿ ಇಟ್ಟುಕೊಂಡ ಕೇಶವಪ್ರಭು ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ: 123/2022 ಕಲಂ: 3,25,27 Indian Arms Act ಪ್ರಕಾರ ಪ್ರಕರಣ ದಾಖಲಾಗಿದೆ.