ನೀರು ಕುಡಿಯಬೇಕಾದರೆ ಅನುಸರಿಸಬೇಕಾದ ಕ್ರಮಗಳು ಮತ್ತು ಅದರಿಂದಾಗುವ ಉಪಯೋಗಗಳೇನು ಗೊತ್ತಾ..?
Saturday, October 29, 2022
_ ನೀರು ನಮ್ಮ ದೇಹದಲ್ಲಿ ಅನೇಕ ಪಾತ್ರಗಳನ್ನು ವಹಿಸುತ್ತದೆ.
- ರಕ್ತದ ಒತ್ತಡ ಜೀವಕೋಶದ ಆರೋಗ್ಯ ದೇಹದ ಉಷ್ಣತೆ ಕೀಲು ಗಳನ್ನು ಸುಗಮವಾಗಿಡುವುದರಲ್ಲಿ ನೀರು ಮುಖ್ಯ ಪಾತ್ರ ವಹಿಸುತ್ತದೆ.
- ಮೊದಲು ನಾವು ಒಂದು ದಿನದಲ್ಲಿ ಎಷ್ಟು ನೀರು ಕುಡಿಯುತ್ತೇವೆ ಎಂಬುದು ಮುಖ್ಯ.
- ಪುರುಷರು ದಿನಕ್ಕೆ 3.7 ಲೀಟರು ನೀರು ಕುಡಿಯಬೇಕು.
-ಮಹಿಳೆಯರು ದಿನಕ್ಕೆ 2.7 ಲೀಟರ್ ನೀರು ಕುಡಿಯಬೇಕು.
- ನೀವು ಕಚೇರಿ ಅಥವಾ ಹೊರಗಡೆ ಕೆಲಸ ಮಾಡುತ್ತಿದ್ದರು -ಒಂದು ಗಂಟೆಗೆ ಒಮ್ಮೆ ಒಂದು ಲೋಟ ನೀರು ಕುಡಿಯಬೇಕು.
-ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ.
-ಹಾಗೆ ಮಲಗುವ ಮುನ್ನ ಒಂದು ಲೋಟ ನೀರು ಕುಡಿಯಿರಿ.
-ಈ ಕ್ರಮವನ್ನು ನಿಮ್ಮ ಜೀವನದುದ್ದಕ್ಕೂ ಅನುಸರಿಸಿರಿ.
ನೀವು ಕಡಿಮೆ ನೀರು ಕುಡಿದರೆ ಮತ್ತು ಹೆಚ್ಚು ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸೇವಿಸಿದರೆ ಅವುಗಳಿಂದ ಕೂಡ ಹೆಚ್ಚು ನೀರು ಸಿಗುತ್ತದೆ.