
ಆನೆಕಾಲು ರೋಗ ತಡೆಗೆ ಮಾತ್ರೆಗಳನ್ನು ನುಂಗಿದ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Tuesday, November 15, 2022
ಯಾದಗಿರಿ: ಆನೆಕಾಲು ರೋಗ ಭಾದೆ ತಡೆಯಲು ಔಷದಿ ಸೇವಿಸಿರುವ ಯಾದಗಿರಿ ತಾಲೂಕಿನ ಶೆಟ್ಟಿಗೆರೆ ಗ್ರಾಮದ ಸರಕಾರಿ ಶಾಲೆಯ 20ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ.
ಶಾಲೆಯಲ್ಲಿ ಆನೆಕಾಲು ರೋಗ ಮುಕ್ತಕ್ಕೆ ಔಷಧಿಗಳನ್ನು ಸೇವಿಸುವ ಕಾರ್ಯಕ್ರಮವಿತ್ತು. ಅದಕ್ಕಾಗಿ ಈ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನುಂಗಿಸಲಾಗಿತ್ತು. ಆದರೆ ಮಾತ್ರೆಗಳನ್ನು ಸೇವಿಸಿರುವ 20ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾಗಿದ್ದಾರೆ.
ಜಿಲ್ಲಾಸ್ಪತ್ರೆಗೆ ಟಿಎಚ್‌ಓ ಡಾ.ಹಣಮಂತ ರೆಡ್ಡಿ ಭೇಟಿ, ಪರಿಶೀಲನೆ ನಡೆಸಿದರು. ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಮುಂದುವರಿದಿದೆ. ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.