ಆಳ್ವಾಸ್ : ರಕ್ತದಾನ ಶಿಬಿರ- ಒಟ್ಟು 234 ಯೂನಿಟ್ ರಕ್ತ ಸಂಗ್ರಹ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎನ್‌ಸಿಸಿ ಭೂದಳ ಹಾಗೂ ಎನ್‌ಎಸ್‌ಎಸ್ ಘಟಕವು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಆಳ್ವಾಸ್ ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಕಾಲೇಜಿನ ಕಾಮಾರ್ಸ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಿತ್ತು.
ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಆಂಟೋನಿ ಮಾತನಾಡಿ ಆಳ್ವಾಸ್ ಶಿಕ್ಷಣ ಸಂಸ್ಥೆಯು ನಿರಂತರವಾಗಿ ರಕ್ತದಾನ ಬಗ್ಗೆ ಜಾಗೃತಿಯನ್ನು ಮೂಡಿಸುತ್ತ, ಕೋವಿಡ್ ಸಂದರ್ಭದಲ್ಲೂ ರಕ್ತದಾನ ಮಾಡಿತ್ತು ಎಂದರು. ಯುವಜನತೆ ರಕ್ತದಾನದ ಮಹತ್ವವನ್ನು ಅರಿತು ಇತರರಿಗೆ ರಕ್ತದಾನ ಮಾಡಲು ಪ್ರೇರೇಪಿಸಬೇಕು. ನೀವು ದಾನ ಮಾಡುವ ರಕ್ತ ಬೇರೆಯವರ ಜೀವವನ್ನು ಉಳಿಸುತ್ತದೆ ಮತ್ತು ಅವರ ಮನೆಯವರ ಕಣ್ಣೀರನ್ನು ಒರೆಸುತ್ತದೆ ಎಂದರು.
ಇಂದು ತಂತ್ರಜ್ಞಾನದ ಸಹಾಯದಿಂದ ದಾನ ಮಾಡಿದ ರಕ್ತವನ್ನು ಬೇರೆ ಬೇರೆ ಕಾಂಪೋನೆAಟ್ಸ್ಗಳಾಗಿ ವಿಂಗಡಿಸಿ ರೋಗಿಗೆ ಅವಶ್ಯಕತೆ ಇರುವ ಕಾಂಪೋನೆAಟ್ಸ್ಗಳನ್ನು ನೀಡಲಾಗುತ್ತದೆ.
ಶಿಬಿರದಲ್ಲಿ ಉಪನ್ಯಾಸಕರೂ ಸೇರಿದಂತೆ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಒಟ್ಟು 234 ಯೂನಿಟ್ ರಕ್ತ ಸಂಗ್ರಹವಾಯಿತು.
ಕರ‍್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಶರ್ಮಿಳಾ ಕುಂದರ್, ವೆನ್ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ಆಂಟೋನಿ, ವೆನ್ಲಾಕ್ ಆಸ್ಪತ್ರೆ ವೈದ್ಯೆ ಡಾ. ವಿಜಯಶ್ರೀ, ಸುಬೇದಾರ್ ಜೀವನ್ ಸಿಂಗ್, ಆಳ್ವಾಸ್ ಆಸ್ಪತ್ರೆಯ ಪಬ್ಲಿಕ್ ರೀಲೆಶನ್ ಆಫೀಸರ್ ರಂಜನ್ ರೈ, ಎನ್‌ಸಿಸಿ ಭೂಸೇನಾದಳದ ಅಧಿಕಾರಿ ಕ್ಯಾಪ್ಟನ್ ಡಾ ರಾಜೇಶ್ ಬಿ, ಎನ್.ಎಸ್.ಎಸ್ ಘಟಕದ ಸಂಯೋಜಕ ವಸಂತ ಎ ಉಪಸ್ಥಿತರಿದ್ದರು. ಎನ್‌ಸಿಸಿ ಕೆಡೆಟ್ ನಯನ ನಿರೂಪಿಸಿದರು.