ಬಂಟ್ವಾಳ: ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಎಸಗಿ 4 ತಿಂಗಳ ಗರ್ಭವತಿಯನ್ನಾಗಿಸಿದ ಕಾಮುಕ ಮಲ ತಂದೆ ಅರೆಸ್ಟ್
Friday, November 18, 2022
ಬಂಟ್ವಾಳ: ಅಪ್ರಾಪ್ತ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿದ ಮಲ ತಂದೆಯನ್ನು ಪೊಲೀಸರು ಬಂಧಿಸಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ.
ತುಂಬೆ ರಾಮನಿವಾಸ ನಿವಾಸಿ ವೆಂಕಟೇಶ ಕಾರಂತ ಆರೋಪಿ.
ವೆಂಕಟೇಶ ಕಾರಂತ ತುಂಬೆಯಲ್ಲಿ ಪುರೋಹಿತ ಕೆಲಸ ಮಾಡುತ್ತಿದ್ದನು. ಈತ ತನ್ನ ಮಲ ಪುತ್ರಿಯ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಾಲಕಿಯ ತಂದೆ ಅಪಘಾತದಲ್ಲಿ ಮೃತಪಟ್ಟ ಬಳಿಕ ಆಕೆಯ ತಾಯಿ ಆರೋಪಿಯನ್ನು ಎರಡನೇ ವಿವಾಹವಾಗಿದ್ದರು. ಬಾಲಕಿಯೂ ಇವರೊಂದಿಗೆ ವಾಸವಾಗಿದ್ದಳು.
ನಿರಂತರ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪರಿಣಾಮ ಆಕೆ 4 ತಿಂಗಳ ಗರ್ಭವತಿಯಾಗಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.