ರಿಷಭ್ ಶೆಟ್ಟಿಯನ್ನು ಭೇಟಿಯಾದ ಜಗದ್ವಿಖ್ಯಾತ ಕ್ರಿಕೆಟಿಗ ಎಬಿಡಿ
Friday, November 4, 2022
ನವದೆಹಲಿ: ಜಗದ್ವಿಖ್ಯಾತ ಕ್ರಿಕೆಟ್ ಆಟಗಾರ ಎಬಿ ಡೆವಿಲಿಯರ್ಸ್ ನಿನ್ನೆ ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ರಿಷಭ್ ಶೆಟ್ಟಿಯವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಕಾಂತಾರ ಸಿನಿಮಾ ಯಾವ ರೀತಿಯ ಹವಾ ಸೃಷ್ಟಿಸಿದೆ ಎಂದು ತಿಳಿಯಬಹುದು.
ಇಂದು ರಿಷಭ್ ಶೆಟ್ಟಿಯವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅವರು "ನಾನು ಇಂದು ರಿಯಲ್ 360ಯನ್ನು ಭೇಟಿ ಮಾಡಿದ್ದೇನೆ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ಗೆ ಭಾರಿ ಕಮೆಂಟ್ಸ್ ಗಳು ಬಂದಿದೆ. ಅಭಿಮಾನಿಗಳು, ನೆಟ್ಟಿಗರು ಭಾರೀ ಹರ್ಷ ವ್ಯಕ್ತಪಡಿಸಿ 'ಇಬ್ಬರು ಲೆಜೆಂಡ್ ಗಳು', 'ವಾಹ್' ಎಂದೆಲ್ಲಾ ಕಮೆಂಟ್ಸ್ ಮಾಡಿದ್ದಾರೆ.