
ಮಂಗಳೂರು: ಸ್ಕೂಟರ್ ಗೆ ಲಾರಿ ಢಿಕ್ಕಿ: ಇಬ್ಬರು ಬಲಿ, ಮಕ್ಕಳಿಬ್ಬರಿಗೆ ಗಾಯ
Sunday, November 6, 2022
ಮಂಗಳೂರು: ನಾಲ್ವರು ಸಂಚಾರ ಮಾಡುತ್ತಿದ್ದ ಸ್ಕೂಟರೊಂದಕ್ಕೆ ಲಾರಿ ಢಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟು, ಮಕ್ಕಳಿಬ್ಬರು ಗಾಯಗೊಂಡ ಘಟನೆ ಜಪ್ಪಿನಮೊಗರು ಬಳಿಯ ಕಲ್ಲಾಪುವಿನಲ್ಲಿ ನಡೆದಿದೆ.
ನಗರದ ಜಪ್ಪಿನಮೊಗರು ನಿವಾಸಿ ಗಂಗಾಧರ ಮತ್ತು ಪಜೀರು ನಿವಾಸಿ ನೇತ್ರಾವತಿ ಮೃತಪಟ್ಟವರು. ನೇತ್ರಾವತಿಯವರ ಪುತ್ರಿ ಮೋಕ್ಷ ( 4) ಮತ್ತು ನೇತ್ರಾವತಿಯ ಸೋದರಿಯ ಪುತ್ರ ಜ್ಞಾನೇಶ್ (6) ಗಾಯಗೊಂಡವರು.
ಗಂಗಾಧರ ಅವರು ನೇತ್ರಾವತಿ ಹಾಗೂ ಮಕ್ಕಳಿಬ್ಬರನ್ನು ಸ್ಕೂಟರ್ ನಲ್ಲಿ ಕರೆದುಕೊಂಡು ಪಂಪ್ ವೆಲ್ ನಿಂದ ತೊಕ್ಕೊಟ್ಟುವಿಗೆ ಸಂಚರಿಸುತ್ತಿದ್ದರು. ಈ ಸಂದರ್ಭ ಕಲ್ಲಾಪು ಗ್ಲೋಬಲ್ ಮಾರ್ಕೆಟ್ ಮುಂಭಾಗ ಕಲ್ಲಾಪು ಮಾರ್ಕೆಟ್ ನಿಂದ ಬಂದ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಲ್ಲಿದ್ದ ನಾಲ್ವರೂ ರಸ್ತೆಗೆ ಬಿದ್ದಿದ್ದಾರೆ. ಈ ಅಪಘಾತದಲ್ಲಿ ಗಂಗಾಧರ್ ಹಾಗೂ ನೇತ್ರಾವತಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದರೆ, ಮಕ್ಕಳಾದ ಜ್ಞಾನೇಶ್ ಹಾಗೂ ಮೋಕ್ಷಾ ಗಂಭೀರವಾಗಿ ಗಾಯಗೊಂಡು ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾರಿ ಚಾಲಕ ಹನೀಫ್ ಎಂಬಾತನ ವಿರುದ್ಧ ದುಡುಕುತನ ನಿರ್ಲಕ್ಷತನದಿಂದ ಲಾರಿಯನ್ನು ಚಲಾಯಿಸಿದ ಪ್ರಕರಣ ದಾಖಲಿಸಲಾಗಿದೆ.