ನವೆಂಬರ್ 11ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ "ಏರೋಫಿಲಿಯಾ 2022" ರಾಷ್ಟ್ರೀಯ ತಂತ್ರಜ್ಞಾನ ಉತ್ಸವ
ನವೆಂಬರ್ 11ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ "ಏರೋಫಿಲಿಯಾ 2022" ರಾಷ್ಟ್ರೀಯ ತಂತ್ರಜ್ಞಾನ ಉತ್ಸವ
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರು ಇದರ ಟೀಮ್ ಚಾಲೆಂಜರ್ಸ್ ಮೂರು ದಿನಗಳ "ಏರೋಫಿಲಿಯಾ 2022"ಕ್ಕೆ ಸಜ್ಜಾಗಿದೆ.
ಈ ವರ್ಷದ ಬಹು ನಿರೀಕ್ಷಿತ ತಂತ್ರಜ್ಞಾನ ಉತ್ಸವಗಳಲ್ಲಿ ಒಂದಾದ ಏರೋಫಿಲಿಯಾ 2022 ನವೆಂಬರ್ 11, 12 ಮತ್ತು 13 ನಡೆಯಲಿದೆ.
ಏರೋಫಿಲಿಯಾ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಉತ್ಸವವಾಗಿದ್ದು, ಇದು ಈ ಹಿಂದೆ ಹಲವಾರು ಉದಯೋನ್ಮುಖ ಎಂಜಿನಿಯರ್ಗಳು ಮತ್ತು ನವ ಉದ್ಯಮಿಗಳಿಗೆ ಮತ್ತು ಅವರ ಹೊಸ ಚಿಂತನೆಗಳಿಗೆ ರೆಕ್ಕೆಗಳನ್ನು ನೀಡಿದ್ದಲ್ಲದೆ ಅದನ್ನು ಮುಂದುವರಿಸಲು ಶ್ರಮಿಸುತ್ತಾ ಬಂದಿದೆ.
ದೇಶದ ಯುವ ಪೀಳಿಗೆಯ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುವುದಲ್ಲದೆ, ಒಬ್ಬರ ಸಾಮಾಜಿಕ ಮತ್ತು ವೃತ್ತಿಪರ ಸಂಪರ್ಕವನ್ನು ವಿಸ್ತರಿಸಲು ಬಹಳಷ್ಟು ಸಹಕರಿಸಿದೆ. ಈ ಏರೋಫಿಲಿಯ ಉತ್ಸವವು ಶಾಲಾ ಮಕ್ಕಳಿಗೆ ವಿಜ್ಞಾನದ ಅದ್ಭುತಗಳನ್ನು ನೋಡಲು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು, ಹಾಗೆಯೇ ಪ್ರಖ್ಯಾತ ವ್ಯಕ್ತಿಗಳನ್ನು ಭೇಟಿ ಮಾಡಲು ಮತ್ತು ಸಂವಾದಿಸಲು ಒಂದು ಅತ್ಯುತ್ತಮ ವೇದಿಕೆಯಾಗಿದೆ.
ಪ್ರಸಕ್ತ ವರ್ಷದ ಏರೋಫಿಲಿಯಾ ಫೆಸ್ಟ್ ಈವರೆಗಿನ ಏರೋಫಿಲಿಯಾ ಫೆಸ್ಟ್ನ 5 ನೇ ಆವೃತ್ತಿಯಾಗಿದೆ ಮತ್ತು ಉಳಿದ ನಾಲ್ಕು ಈ ಮೊದಲ ಉತ್ಸವಗಳು ನಮ್ಮ ಕಾಲೇಜಿನ ಟೀಮ್ ಚ್ಯಾಲೆಂಜರ್ಸ್ ರಾಷ್ಟ್ರವ್ಯಾಪಿ ಮನ್ನಣೆಯನ್ನು ಗಳಿಸುವಲ್ಲಿ ಸಹಾಯ ಮಾಡಿದೆ. ಏರೋಫಿಲಿಯಾ 2016, 2017, 2018 ಮತ್ತು 2019 ರ ಅವಧಿಯಲ್ಲಿ, ಈ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಈವೆಂಟ್ನಲ್ಲಿ ಭಾಗವಹಿಸುವವರು ರೇಡಿಯೊ ನಿಯಂತ್ರಿತ ವಿಮಾನವನ್ನು ವಿನ್ಯಾಸಗೊಳಿಸಲು ನಿರೀಕ್ಷಿಸಲಾಗಿತ್ತು ಮತ್ತು ಅದರ ಆಯಾಮ ಮತ್ತು ಪ್ರೊಪಲ್ಷನ್ ಸಿಸ್ಟಮ್ನಲ್ಲಿ ಕೆಲವು ಮಿತಿಗಳನ್ನು ಕೂಡ ಇಡಲಾಗಿತ್ತು.
ಅಂತರಾಷ್ಟ್ರೀಯ ಖ್ಯಾತಿಯ ಆರ್-ಸಿ ಫ್ಲೈಯರ್ಗಳು ನಡೆಸಿದ ಏರ್ ಶೋಗಳು ಕಾರ್ಯಕ್ರಮದ ಪ್ರಮುಖ ಅಂಶವಾಗಿದ್ದವು. ಐಐಟಿ ಮತ್ತು ಎನ್ಐಟಿಗಳಂತಹ ದೇಶದ ಗಣ್ಯ ಸಂಸ್ಥೆಗಳ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳ್ಳದ ಏರೋಫಿಲಿಯಾ ವಿದ್ಯಾರ್ಥಿಗಳಿಗಾಗಿ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಾ ಬಂದಿದೆ.
ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಈ ವರ್ಷ ನಾವು ಸುಮಾರು 4,000 ಜನ ವಿದ್ಯಾರ್ಥಿ ಗುಂಪನ್ನು ನಿರೀಕ್ಷಿಸುತ್ತಿದ್ದೇವೆ. ವೃತ್ತಿಪರ ಫ್ಲೈಯರ್ಸ್ಗಳ ಮೂಲಕ ಏರ್ ಶೋ ನಡೆಸಲಾಗುತ್ತದೆ. ಐಷಾರಾಮಿ ಮತ್ತು ನವನವೀನ ಕಾರುಗಳನ್ನು ಪ್ರದರ್ಶಿಸುವುದರೊಂದಿಗೆ ನಾವು ಮಂಗಳೂರಿನಲ್ಲಿ ನಡೆಯಲಿರುವ ಅತಿದೊಡ್ಡ ಆಟೋ-ಎಕ್ಸ್ಪೋವನ್ನು ಕೂಡ ಆಯೋಜಿಸುತ್ತಿದ್ದೇವೆ.
ಮುಖ್ಯವಾಗಿ ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜಿಸಲಿರುವ ಇಸ್ರೋ ಸಂಸ್ಥೆಯ ನ್ಯಾವಿಕ್ ಎನ್ನುವ ತಂತ್ರಜ್ಞಾನದ ಬಗೆಗಿನ ಹ್ಯಾಕಥಾನ್ ಈವೆಂಟ್ ನಿಜವಾಗಿಯೂ ಗಮನ ಸೆಳೆಯುವಂತಿದೆ ಮತ್ತು ಈ ಹ್ಯಾಕಥಾನಲ್ಲಿ ಬಹು ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ವಿದ್ಯಾರ್ಥಿಗಳು ಭಾರತದ ಅತ್ಯುತ್ತಮ ತಂತ್ರಜ್ಞಾನವನ್ನು ನೇರವಾಗಿ ಅನುಭವಿಸಲಿದ್ದಾರೆ. ಈವೆಂಟ್ನ ಅವಧಿಯಲ್ಲಿ ಇಸ್ರೋದ ಪ್ರತಿನಿಧಿಗಳು ಮಾಹಿತಿಯುಕ್ತ ತಾಂತ್ರಿಕ ಭಾಷಣವನ್ನು ಕೂಡ ನೀಡಲಿದ್ದಾರೆ.