
ಉಳ್ಳಾಲ: ವೈದ್ಯೆಗೆ ಗುಪ್ತಾಂಗ ತೋರಿಸಿದ ಕಾಮುಕ ಬಸ್ ಕ್ಲೀನರ್ ಬಂಧನ
Thursday, November 10, 2022
ಉಳ್ಳಾಲ: ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಪ್ಯಾಂಟ್ ಜಿಪ್ ಜಾರಿಸಿ ಗುಪ್ತಾಂಗವನ್ನು ತೋರಿಸಿದ ಕಾಮುಕ ಬಸ್ ಕ್ಲೀನರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ನಗರದ ಬಜ್ಪೆ ಕೆಂಜಾರು ನಿವಾಸಿ ಮಹಮ್ಮದ್ ಇಮ್ರಾನ್(26) ಬಂಧಿತ ಕಾಮುಕ.
ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯೆ ಬೆಂಗಳೂರಿನಿಂದ ಮಂಗಳೂರಿಗೆ ಐಡಿಯಲ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ ಅ.10ರಂದು ಮುಂಜಾನೆ ಉಳ್ಳಾಲ ತಲುಪುತ್ತಿದ್ದಂತೆ ಬಸ್ ಕ್ಲೀನರ್ ಮಹಮ್ಮದ್ ಇಮ್ರಾನ್, ವೈದ್ಯೆಗೆ ಪ್ಯಾಂಟ್ ಜಿಪ್ ಜಾರಿಸಿ ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ವೈದ್ಯೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಕ್ಷಣ ಉಳ್ಳಾಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿ ಇಮ್ರಾನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.