ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ದಂಪತಿ ಅರೆಸ್ಟ್
Thursday, November 24, 2022
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಯೋಗ ದೊರಕಿಸಿ ಕೊಡಿಸುವುದಾಗಿ ವಂಚಿಸುತ್ತಿದ್ದ ಖತರ್ನಾಕ್ ದಂಪತಿಯನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ದರ್ಬಿನ್ ದಾಸ್ ಹಾಗೂ ಧನುಷ್ಯಾ ಬಂಧಿತ ದಂಪತಿ. ಪತಿ ದರ್ಬಿನ್ ದಾಸ್ ತಾನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಯಾಗಿದ್ದೇನೆ. ಹಾಗಾಗಿ ಅಲ್ಲಿ ಉದ್ಯೋಗ ಕೊಡಿಸುತ್ತೇನೆಂದು ನಂಬಿಸಿ, ಹಣ ಪಡೆದು ವಂಚಿಸುತ್ತಿದ್ದ.
ಇತ್ತ ದರ್ಬಿನ್ ಪತ್ನಿ ಧನುಷ್ಯಾ ಸಹ ತನ್ನ ಪತಿ ಕಸ್ಟಮ್ಸ್ ಅಧಿಕಾರಿ, ಕಡಿಮೆ ಬೆಲೆಗೆ ಸೀಜ್ ಮಾಡಿದ ಚಿನ್ನಾಭರಣ ಸಿಗುತ್ತದೆ ಎಂದು ಹಣ ಪಡೆದು ವಂಚಿಸುತ್ತಿದ್ದಳು. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕೊಡಿಗೆಹಳ್ಳಿ ಪೊಲೀಸರು, ಆರೋಪಿಗಳಿಂದ 34 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.