ಬುಧ-ಶುಕ್ರ ಅಪರೂಪದ ಸಂಯೋಗ..!! ಈ ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಒಲಿದು ಬರಲಿದೆ..!!
Monday, November 7, 2022
ಬುಧ-ಶುಕ್ರ ಸಂಯೋಗವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಈ ಲಕ್ಷ್ಮೀ ನಾರಾಯಣ ರಾಜ ಯೋಗವು 3 ರಾಶಿಯ ಜನರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ.
ತುಲಾ ರಾಶಿ : ಬುಧ-ಶುಕ್ರರ ಸಂಯೋಗದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ರಾಜಯೋಗವು ತುಲಾ ರಾಶಿಯವರಿಗೆ ಶುಭ ಫಲ ನೀಡಲಿದೆ. ಈ ರಾಶಿಯವರು ಅಪಾರ ಪ್ರಮಾಣದ ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ. ಅವರ ಆದಾಯ ಹೆಚ್ಚಲಿದೆ. ಇದ್ದಕ್ಕಿದ್ದಂತೆ ಹಣದ ಹೊಳೆಯೇ ಹರಿದು ಬರಲಿದೆ.
ಮಕರ ರಾಶಿ : ಲಕ್ಷ್ಮೀ ನಾರಾಯಣ ರಾಜಯೋಗವು ಶುಕ್ರ ಸಂಕ್ರಮಣ ಮತ್ತು ಬುಧ ಸಂಕ್ರಮಣದಿಂದ ರಚನೆಯಾಗುವುದರಿಂದ ಮಕರ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಅವರ ಆದಾಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಬಹುದು. ಉದ್ಯೋಗಿಗಳ ವೇತನ ಹೆಚ್ಚಾಗಬಹುದು.
ಕುಂಭ ರಾಶಿ : ನವೆಂಬರ್‌ನಲ್ಲಿ ಶುಕ್ರ ಸಂಕ್ರಮಣ ಮತ್ತು ಬುಧ ಸಂಕ್ರಮಣದಿಂದ ರೂಪುಗೊಳ್ಳುವ ಲಕ್ಷ್ಮೀ ನಾರಾಯಣ ಯೋಗವು ಕುಂಭ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಅವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ.