ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಶಾರೀಕ್ ನೊಂದಿಗೆ ಮತ್ತೊಬ್ಬ ಬಂದಿದ್ದನೇ?; ಸಿಸಿ ಕ್ಯಾಮರಾದ ದೃಶ್ಯ ನೋಡಿ- ಕಮೀಷನರ್ ಹೇಳಿದ್ದೇನು?
Tuesday, November 22, 2022
ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಶಂಕಿತ ಭಯೋತ್ಪಾದಕ ಮೊಹಮ್ಮದ್ ಶಾರೀಕ್ ನೊಂದಿಗೆ ಮೈಸೂರಿನಿಂದ ಮತ್ತೊಬ್ಬನಿದ್ದ ಎಂಬ ವಿಚಾರವೊಂದು ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಸತ್ಯವಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.
ಮೈಸೂರು - ಮಂಗಳೂರು ಬಸ್ಸಿನಲ್ಲಿ ಬಂದಿದ್ದ ಶಾರೀಕ್ ಹಾಗೂ ಮತ್ತೋರ್ವ ಇಬ್ಬರೂ ಪಡೀಲಿನಲ್ಲಿ ಬಸ್ ನಿಂದ ಇಳಿದ ಬಳಿಕ ಪಡೀಲ್ ನಲ್ಲಿ ಬಸ್ ನಿಲ್ದಾಣದಲ್ಲಿ ಇಳಿದ ಇಬ್ಬರೂ ನಾಗುರಿಗೆ ನಡೆದು ಹೋಗಿದ್ದು, ನಾಗುರಿಯಲ್ಲಿ ವೈನ್ ಶಾಪ್ ಒಂದರಲ್ಲಿ ಮದ್ಯದ ಬಾಟಲಿಯನ್ನು ಖರೀದಿಸಿ ಹೊರ ಹೋಗುವ ವೇಳೆ ಇಬ್ಬರು ಇದ್ದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾಗ್ ಹಿಡಿದುಕೊಂಡು ಇಬ್ಬರು ವೈನ್ ಶಾಪ್ ನಿಂದ ಹೊರ ಬರುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆದರೆ ಈ ವಿಡಿಯೋ ದಲ್ಲಿ ಸತ್ಯಾಂಶವಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.