-->
ಬೆಳ್ತಂಗಡಿ: ಪೆರಾಲ್ದರಕಟ್ಟೆಯಲ್ಲಿ ಜನ - ಜಾನುವಾರುಗಳ ಮೇಲೆರಗಿದ ಹುಚ್ಚುನಾಯಿ: ಹಲವರಿಗೆ ಗಾಯ

ಬೆಳ್ತಂಗಡಿ: ಪೆರಾಲ್ದರಕಟ್ಟೆಯಲ್ಲಿ ಜನ - ಜಾನುವಾರುಗಳ ಮೇಲೆರಗಿದ ಹುಚ್ಚುನಾಯಿ: ಹಲವರಿಗೆ ಗಾಯ

ಬೆಳ್ತಂಗಡಿ: ಇಲ್ಲಿನ ಬಳೆಂಜ ಗ್ರಾಪಂ ವ್ಯಾಪ್ತಿಯ ಪೆರಾಲ್ದರಕಟ್ಟೆ ಎಂಬಲ್ಲಿ ರೇಬಿಸ್ ಕಾಯಿಲೆ ಪೀಡಿತ ನಾಯಿಯೊಂದು ಜನ ಜಾನುವಾರುಗಳಿಗೆ ಕಚ್ಚಿ ರಾದ್ಧಾಂತ ಸೃಷ್ಟಿಸಿರುವ ಘಟನೆ ನಡೆದಿದೆ.

ದಾರಿ ಹೋಕ ಮಹಿಳೆಯರಿಗೆ, ಹಟ್ಟಿಗೆ ನುಗ್ಗಿ ಜಾನುವಾರುಗಳಿಗೆ, ಮನೆಯ ಸಮೀಪದಲ್ಲಿಯೇ ಕಟ್ಟಿ ಹಾಕಿರುವ ಮೇಕೆ ಮರಿಗೆ ಈ ರೇಬಿಸ್ ಪೀಡಿತ ನಾಯಿ ಕಚ್ಚಿ ಗಾಯಗೊಳಿಸಿದೆ. ಈ ನಾಯಿ ಬೀದಿಬದಿಯ ಭಾಗಶಃ ಎಲ್ಲಾ ಶ್ವಾನಗಳ ಮೇಲೂ ಈ ಹುಚ್ಚು ನಾಯಿ ದಾಳಿ ನಡೆಸಿದೆ.‌ ಬಳಿಕ ಸಾರ್ವಜನಿಕರು ಗ್ರಾಪಂ ಸದಸ್ಯ ನಿಝಾಂರವರ ನೇತೃತ್ವದಲ್ಲಿ ಸಾರ್ವಜನಿಕರು ಹುಚ್ಚು ನಾಯಿಯನ್ನು ಬೆನ್ನಟ್ಟಿ ಹೊಡೆದು ಸಾಯಿಸಿದ್ದಾರೆ. ಇಲ್ಲದಿದ್ದರೆ‌ ಆ ನಾಯಿ ಇನ್ನಷ್ಟು ಅಪಾಯವನ್ನು ತಂದೊಡ್ಡುವ ಸಾಧ್ಯತೆ‌ಯಿದೆ ಎನ್ನಲಾಗಿದೆ.

ಹುಚ್ಚ ನಾಯಿ ಹಾವಳಿಯ ಬಗ್ಗೆ ಈಗಾಗಲೇ ನಮ್ಮ ಇಲಾಖೆಯ ಗಮನಕ್ಕೆ ಬಂದಿದೆ. ಇಂದು‌ ಸ‌ಂಜೆಯೇ ಸ್ಥಳಕ್ಕೆ ತೆರಳಿ ಗಾಯಗಳಾಗಿರುವ ಜನ‌, ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ ಮಾಡಲಾಗುತ್ತದೆ ಎಂದು ಬೆಳ್ತಂಗಡಿ ಪಶುಸಂಗೋಪನೆ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.‌ಮಂಜ ನಾಯ್ಕ್ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article