ಕೃಷ್ಣನ ಈ ಅಚ್ಚುಮೆಚ್ಚಿನ ಮಾಸದಲ್ಲಿ ನವಿಲುಗರಿ ಮನೆಯೊಳಗೆ ಇಟ್ಟರೆ ಹಣದ ಜೊತೆ ಏನೆಲ್ಲ ಶುಭ ಫಲ ಪ್ರಾಪ್ತಿ ಗೊತ್ತಾ..?
Thursday, November 17, 2022
ಮನೆಯಲ್ಲಿ ನವಿಲು ಗರಿಯನ್ನು ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ ಎನ್ನುತ್ತಾರೆ. ಇದರೊಂದಿಗೆ ಲಕ್ಷ್ಮೀ ಕೂಡ ಮನೆಯಲ್ಲಿ ನೆಲೆಸುತ್ತಾಳೆ.
ನವಿಲು ಗರಿ ಪ್ರಭಾವ ದೊಡ್ಡದಾಗಿದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ವ್ಯಕ್ತಿಯ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕೊಳಲುವಿನ ಜೊತೆಗೆ ನವಿಲು ಗರಿಯನ್ನು ಇಡುವುದರಿಂದ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚುತ್ತದೆ.
ಶ್ರೀಕೃಷ್ಣನಿಗೆ ನವಿಲು ಗರಿ ಬಹಳ ಪ್ರಿಯ. ನವಿಲು ಗರಿಯನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ತಾಯಿ ಲಕ್ಷ್ಮೀ ದೆವಿಯ ಕೃಪೆ ಜೀವನದಲ್ಲಿ ಉಳಿಯುತ್ತದೆ ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ವೈವಾಹಿಕ ಜೀವನದಲ್ಲಿ ಸಮಸ್ಯೆ ಇದ್ದರೆ, ಮಲಗುವ ಕೋಣೆಯಲ್ಲಿ ನವಿಲು ಗರಿಗಳನ್ನು ಇಡಬೇಕು. ಹೀಗೆ ಮಾಡುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಮಧುರತೆ ಬರುತ್ತದೆ.
ಗ್ರಹ ದೋಷಗಳ ಅಶುಭ ಪರಿಣಾಮಗಳನ್ನು ತಪ್ಪಿಸಲು, ಗ್ರಹ ಮಂತ್ರವನ್ನು 21 ಬಾರಿ ಜಪಿಸಬೇಕು. ಇದಾದ ನಂತರ ನವಿಲು ಗರಿಗೆ ನೀರು ಚಿಮುಕಿಸಿ ಶುಭ ಸ್ಥಳದಲ್ಲಿ ಇಡುವುದರಿಂದ ಗ್ರಹಗಳ ಅಶುಭ ನಿವಾರಣೆಯಾಗುತ್ತದೆ.