ಬೆಂಗಳೂರು: ವೃದ್ಧನನ್ನು ನಗ್ನಗೊಳಿಸಿ ಹನಿಟ್ರ್ಯಾಪ್ ಮಾಡಿರುವ ಖತರ್ನಾಕ್ ಮಹಿಳೆ ಅರೆಸ್ಟ್
Tuesday, November 8, 2022
ದಾವಣಗೆರೆ: ಕಷ್ಟದಲ್ಲಿದ್ದ ಮಹಿಳೆಗೆ ಸಾಲ ನೀಡಿದ್ದ ವೃದ್ಧರೋರ್ವರು ಸಾಲ ವಾಪಸ್ ಕೇಳಿದಾಗ ಅವರನ್ನು ಪ್ರಜ್ಞೆ ತಪ್ಪಿಸಿ ನಗ್ನ ಮಾಡಿ ತನ್ನೊಂದಿಗೆ ಮಲಗಿಸಿ ಫೋಟೋ ತೆಗೆಸಿಕೊಂಡು ಹನಿಟ್ರ್ಯಾಪ್‍ಗೆ ಯತ್ನಿಸಿ 15 ಲಕ್ಷ ರೂ.ಗೆ ಬೇಡಿಕೆ ಇಟ್ಟ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ನಗರದ ಶಿವಕುಮಾರ ಸ್ವಾಮಿ ಬಡಾವಣೆ ನಿವಾಸಿ ಚಿದಾನಂದಪ್ಪ(79) ಹನಿಟ್ರ್ಯಾಪ್‍ಗೆ ಬಲಿಯಾದ ವೃದ್ಧ. ಸರಸ್ವತಿ ನಗರ ನಿವಾಸಿ ಯಶೋಧಾ(32) ಹನಿಟ್ರ್ಯಾಪ್ ಗೆ ಯತ್ನಿಸಿದ ಮಹಿಳೆ.
ಯಶೋಧಾಗೆ ವೃದ್ಧ ಚಿದಾನಂದಪ್ಪರ ಪರಿಚಯವಾಗಿ ಸ್ನೇಹಕ್ಕೆ ತಿರುಗಿದೆ. ಬಳಿಕ ಯಶೋಧಾ ಆಗಾಗ ನೆಪವೊಡ್ಡಿ ಅಲ್ಪ ಸ್ವಲ್ಪ ಎಂದು ಬರೋಬ್ಬರಿ 86 ಸಾವಿರ ರೂ. ಸಾಲ ಪಡೆದಿದ್ದಾಳೆ. ಕೆಲಸದಿಂದ ನಿವೃತ್ತರಾಗಿರುವ ಚಿದಾನಂದಪ್ಪ ತಾನು ನೀಡಿದ್ದ ಹಣ ನೀಡಿರುವ ಹಣ ಮರಳಿಸುವಂತೆ ಕೇಳಿದ್ದಾರೆ. ಆದರೆ ಯಶೋಧಾ ಹಣ ವಾಪಸ್ ಮಾಡಿರಲಿಲ್ಲ.
ಒಂದು ದಿನ ಚಿದಾನಂದಪ್ಪರನ್ನು ಮನೆಗೆ ಕರೆದ ಯಶೋಧಾ ಜ್ಯೂಸ್ ನಲ್ಲಿ ಪ್ರಜ್ಞೆ ತಪ್ಪುವ ಪದಾರ್ಥ ಬೆರೆಸಿ ಕೊಟ್ಟಿದ್ದಾಳೆ. ಅದನ್ನು ಕುಡಿದ ಕೆಲ ಹೊತ್ತಿನಲ್ಲಿಯೇ ವೃದ್ಧ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಎಚ್ಚರವಾದ ಬಳಿಕ ಚಿದಾನಂದಪ್ಪ ಮೈ ಮೇಲೆ ಬಟ್ಟೆ ಇರಲಿಲ್ಲ. ಭಯಗೊಂಡ ಅವರು ಬಟ್ಟೆ ಧರಿಸಿ ಮನೆಗೆ ಬಂದಿದ್ದಾರೆ. ಈ ಘಟನೆ ನಡೆದು ಎರಡು ದಿನಕ್ಕೆ ಹಣಕ್ಕಾಗಿ ಮತ್ತೆ ಚಿದಾನಂದಪ್ಪ ಫೋನ್ ಮಾಡಿದ್ದಾರೆ. ಆಗ ನೀನು ನನ್ನೊಂದಿಗೆ ಮಲಗಿರುವೆ. ನನ್ನ ಬಳಿ ವೀಡಿಯೋ ಇದೆ. 15 ಲಕ್ಷ ರೂ. ಕೊಡು. ಇಲ್ಲದಿದ್ದಲ್ಲಿ ನಿನ್ನ ಪತ್ನಿ ಹಾಗೂ ಮಕ್ಕಳಿಗೆ ವೀಡಿಯೋ ತೋರಿಸುವೆ ಎಂದಿದ್ದಾಳೆ. ಹೆದರಿ ಈ ವಿಚಾರ ಪರಿಚಯದವರ ಬಳಿ ಚಿದಾನಂದಪ್ಪ ಹೇಳಿಕೊಂಡಿದ್ದಾರೆ.
ಚಿದಾನಂದಪ್ಪ 7 ರಿಂದ 8 ಲಕ್ಷ ರೂ. ಮಾತನಾಡಿ ಡೀಲ್ ಮುಗಿಸಲು ಮುಂದಾಗಿದ್ದಾರೆ. ಆದರೆ ಯಶೋಧಾ ಮಾತ್ರ 15 ಲಕ್ಷ ರೂ. ಬೇಕೆಂದು ಪಟ್ಟು ಹಿಡಿದಿದ್ದಾಳೆ. ಇದೇ ವೇಳೆ ಚಿದಾನಂದಪ್ಪರ ವಾಟ್ಸ್ಆ್ಯಪ್‍ಗೆ ಒಂದು ನಗ್ನವಾದ ಫೋಟೋ ಅವಳ ಮುಖ ಕಾಣದ ಹಾಗೆ ಮಾಡಿ ಕಳುಹಿಸಿದ್ದಾಳೆ. ಪರಿಸ್ಥಿತಿ ಗಂಭೀರತೆಯನ್ನು ಅರಿತು ಚಿದಾನಂದಪ್ಪ ತನ್ನ ಪುತ್ರನಿಗೆ ಈ ವಿಚಾರ ತಿಳಿಸಿದ್ದಾರೆ. ಆ ಬಳಿಕ ಪೊಲೀಸ್ ದೂರು ದಾಖಲಿಸಲಾಗಿದೆ. ಈ ಬಗ್ಗೆ ಕೆಟಿಜೆನಗರ ಠಾಣೆಯ ಪೊಲೀಸರು ಯಶೋಧಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.