ನಗ್ನ ಮಹಿಳೆಯಿಂದ ಶಾಸಕ ತಿಪ್ಪಾರೆಡ್ಡಿಗೆ ವೀಡಿಯೋ ಕರೆ: ಹನಿಟ್ರ್ಯಾಪ್ ದೂರು ದಾಖಲು
Wednesday, November 2, 2022
ಚಿತ್ರದುರ್ಗ: ಅಪರಿಚಿತೆಯೋರ್ವಳು ನಗ್ನಳಾಗಿ ತನಗೆ ವೀಡಿಯೋ ಕರೆ ಮಾಡಿದ್ದಾಳೆಂದು ಚಿತ್ರದುರ್ಗದ ಬಿಜೆಪಿ ಶಾಸಕ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಶಾಸಕ ತಿಪ್ಪಾರೆಡ್ಡಿಯವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲು ಗ್ಯಾಂಗ್ ಒಂದು ಮಾಡಿರುವ ವ್ಯರ್ಥ ಪ್ರಯತ್ನವಾಗಿದೆ. ಘಟನೆಗೆ ಸಂಬಂಧಿಸಿದ ಶಾಸಕ ತಿಪ್ಪಾರೆಡ್ಡಿಯವರು ದೂರು ದಾಖಲಿಸಿದ್ದರಿಂದ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅ.31ರಂದು ತಿಪ್ಪಾರೆಡ್ಡಿಯವರಿಗೆ ಅಪರಿಚಿತ ಮಹಿಳೆಯಿಂದ ಕರೆ ಬಂದಿದೆ. ಆರಂಭದಲ್ಲಿ ಮಾಮೂಲಿ ಕರೆ ಮಾಡಿದ್ದು, ಆ ಬಳಿಕ ವಾಟ್ಸ್ಆ್ಯಪ್ ವೀಡಿಯೋ ಕರೆ ಮಾಡಿದ್ದಾರೆ. ಆದರೆ ಆ ಕಡೆಯಿಂದ ಹಿಂದಿಯಲ್ಲಿ ಮಾತನಾಡುತ್ತಿದ್ದ ಮಹಿಳೆ ಸಂಪೂರ್ಣ ಬೆತ್ತಲಾಗಿದ್ದಳು. ಇದರಿಂದ ಬೆಚ್ಚಿಬಿದ್ದ ಶಾಸಕರು ಕರೆ ಕಟ್ ಮಾಡಿದ್ದಾರೆ.
ಇದಾದ ಬಳಿಕ ಆ ಮೊಬೈಲ್ ಸಂಖ್ಯೆಯಿಂದ ಹಲವು ಪೋರ್ನ್ ವೀಡಿಯೋಗಳು ಬಂದಿತ್ತು. ಶಾಸಕರು ಎಲ್ಲಾ ವೀಡಿಯೋಗಳನ್ನು ಅಳಿಸಿ ನಂಬರ್ ಬ್ಲಾಕ್ ಮಾಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.