-->
ಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ

ಕೆಎಂಎಫ್ ನೇಮಕಾತಿ; 487 ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಿ






ಕರ್ನಾಟಕ ಹಾಲು ಒಕ್ಕೂಟ (KMF) (ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ.) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 19-11-2022


ರಾಜ್ಯದ "ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿ., ಬೆಂಗಳೂರು" ಇಲ್ಲಿ ಖಾಲಿ ಇರುವ ವಿವಿಧ ವೃಂದದ 487 ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಅಪೂರ್ಣ, ಅಸ್ಪಷ್ಟ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.


ಹುದ್ದೆಗಳ ಸಂಖ್ಯೆಯಲ್ಲಿ ಬದಲಾವಣೆ (ಹೆಚ್ಚು/ ಕಡಿಮೆ) ಮಾಡುವ ಹಕ್ಕನ್ನು ಮಹಾಮಂಡಳದ ನೇಮಕಾತಿ ಪ್ರಾಧಿಕಾರ ಕಾಯ್ದಿರಿಸಿದೆ. ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದ್ದು.

ನಿಗದಿತ ಅರ್ಜಿ ಶುಲ್ಕದ ಜೊತೆಗೆ ಮೊದಲು ಸಲ್ಲಿಕೆಯಾದ ಅರ್ಜಿಯನ್ನು ಮಾತ್ರ ಪರಿಣಿಸಲಾಗುವುದು.


ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಇಚ್ಚೆ ಇದ್ದರೆ, ಅಂತಹ ಅಭ್ಯರ್ಥಿಗಳು ಒಂದೇ ನೋಂದಣಿ ಸಂಖ್ಯೆಯಲ್ಲೇ ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಶುಲ್ಕವನ್ನು ಪಾವತಿಸಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.


ಹುದ್ದೆಗಳ ವಿವರ

ಹಿರಿಯ ಉಪ ನಿರ್ದೇಶಕ (ವಿತ್ತ) 1ಹುದ್ದೆಗಳು,

ಹಿರಿಯ ಉಪ ನಿರ್ದೇಶಕ (ಮಾರುಕಟ್ಟೆ) 1 ಹುದ್ದೆಗಳು,

ಹಿರಿಯ ಉಪ ನಿರ್ದೇಶಕ (ಪಶು ಆಹಾರ) 1 ಹುದ್ದೆಗಳು,

ಉಪ ನಿರ್ದೇಶಕ (ವಿತ್ತ) 3 ಹುದ್ದೆಗಳು,

ಉಪ ನಿರ್ದೇಶಕ (ಪಶು ವೈದ್ಯಕೀಯ) 5 ಹುದ್ದೆಗಳು,

ವೈದ್ಯಾಧಿಕಾರಿ 1 ಹುದ್ದೆಗಳು


ಬಯೋ ಸೆಕ್ಯೂರಿಟಿ ಆಫೀಸರ್ 1,

ಉಪ ನಿರ್ದೇಶಕ (ಮಾರುಕಟ್ಟೆ) 4,

ಉಪ ನಿರ್ದೇಶಕ (ಡಿ. ಟಿ) 1,

ಉಪ ನಿರ್ದೇಶಕ (ಡಿ. ಟಿ) ಉಳಿಕೆ ವೃಂದ 1,

ಉಪ ನಿರ್ದೇಶಕ (ಉತ್ಪಾದನೆ) 1,

ಸಹಾಯಕ ನಿರ್ದೇಶಕ (ಡೇರಿ ಟೆಕ್ನಾಲಜಿ) 25 ಹುದ್ದೆಗಳು



ಲೆಕ್ಕ ಸಹಾಯಕ ದರ್ಜೆ-2 : 30 ಹುದ್ದೆಗಳು

ಮಾರುಕಟ್ಟೆ ಸಹಾಯಕ ದರ್ಜೆ-2 23 ಹುದ್ದೆಗಳು,

ಲ್ಯಾಬ್ ಸಹಾಯಕ ದರ್ಜೆ-2 (ಕೆಮಿಸ್ಟ್ರಿ) 15 ಹುದ್ದೆಗಳು,

ಲ್ಯಾಬ್ ಸಹಾಯಕ ದರ್ಜೆ -2 (ಮೈಕ್ರೋ ಬಯಾಲಜಿ) 15 ಹುದ್ದೆಗಳು,

ಹಿರಿಯ ತಾಂತ್ರಿಕ 10 ಹುದ್ದೆಗಳು.


ವಿವಿಧ ಹುದ್ದೆಗಳ ನೇರ ನೇಮಕಾತಿ

ಸಹಾಯಕ ನಿರ್ದೇಶಕ (ಫುಡ್ ಟೆಕ್ನಾಲಜಿ & ಫುಡ್ ಸೈನ್ಸ್ & ಟೆಕ್ನಾಲಜಿ) 3 ಹುದ್ದೆಗಳು.

ಸಹಾಯಕ ನಿರ್ದೇಶಕರ (ಅಭಿಯಂತರ) 1,

ಸಹಾಯಕ ನಿರ್ದೇಶಕ (ಅಭಿಯಂತರ) ಉಳಿಕೆ ವೃಂದ 1,

ಸಹಾಯಕ ನಿರ್ದೇಶಕ (ಅಭಿಯಂತರ) (ಕೆಮಿಕಲ್) 1,

ಸಹಾಯಕ ನಿರ್ದೇಶಕ (ಕೃಷಿ) 2, ವಿಲೆಜೆನ್ಸ್ ಅಫೀಸರ್ 1 ಹುದ್ದೆಗಳು


ಸೇಫ್ಟಿ ಆಫೀಸರ್ 1, ಸ. ನಿರ್ದೇಶಕ (Architect / Structure) 1,

ಸಹಾಯಕ ನಿರ್ದೇಶಕ (ತರಬೇತಿ) (ಡೇರಿ ತಾಂತ್ರಿಕ) 1,

ಸಹಾಯಕ ನಿರ್ದೇಶಕ (ತರಬೇತಿ) (ಅಭಿಯಂತರ) 1,

ಸಹಾಯಕ ನಿರ್ದೇಶಕ (ತರಬೇತಿ) (ಕೃಷಿ) 1 ಹುದ್ದೆಗಳು



ಶೀಘ್ರಲಿಪಿಗಾರ ದರ್ಜೆ-2: - 1 ಹುದ್ದೆಗಳು,

ಕಿರಿಯ ಸಿಸ್ಟಂ ಆಪರೇಟರ್ 15 ಹುದ್ದೆಗಳು,

ಹಿರಿಯ ಕೋ-ಆರ್ಡಿನೇಟರ್ (ಪ್ರೊಟೆಕ್ಷನ್) 6 ಹುದ್ದೆಗಳು,

ಸ್ಟಾಪ್ ನರ್ಸ್‌ 3 ಹುದ್ದೆಗಳು,

ಕಿರಿಯ ತಾಂತ್ರಿಕ (ಮೆಕಾಟ್ರಾನಿಕ್ಸ್) 12 ಹುದ್ದೆಗಳು,

ಕಿರಿಯ ತಾಂತ್ರಿಕ (ರಿಫ್ರಿಜರೇಷನ್ & ಏರ್ ಕಂಡೀಷನ್) 18 ಹುದ್ದೆಗಳು,

ಕಿರಿಯ ತಾಂತ್ರಿಕ (ಫಿಟ್ಟರ್) 25 ಹುದ್ದೆಗಳು,

ಕಿರಿಯ ತಾಂತ್ರಿಕ (ಟರ್ನರ್) 19 ಹುದ್ದೆಗಳು,

ಕಿರಿಯ ತಾಂತ್ರಿಕ (ವೆಲ್ಡರ್) 12 ಹುದ್ದೆಗಳು,

ಕಿರಿಯ ತಾಂತ್ರಿಕ (ಎಲೆಕ್ಟ್ರಿಕಲ್) 45 ಹುದ್ದೆಗಳು.

Ads on article

Advertise in articles 1

advertising articles 2

Advertise under the article