ವೈಲ್ಡ್ ಕಾರ್ಡ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುತ್ತಿರುವ ಆ ಎರಡು ಸ್ಪರ್ಧಿಗಳು ಯಾರು ಗೊತ್ತಾ??
Saturday, November 12, 2022
ಸೋನು ಗೌಡ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಯೊಳಗೆ ಕಳಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಟಿಟಿ ಬಿಗ್‌ಬಾಸ್ ಸೀಸನ್‌ನಲ್ಲಿ ಭಾಗವಹಿಸಿದ್ದ ಸೋನು ಗೌಡ, ರಾಕೇಶ್ ಅಡಿಗ ಜೊತೆ ಉತ್ತಮ ಗೆಳೆತನ ಹೊಂದಿದ್ದರು. ಈಗ ರಾಕೇಶ್ ಹಾಗೂ ಅಮೂಲ್ಯ ಗೌಡ ನಡುವೆ ಆಪ್ತತೆ ಇದ್ದು, ಸೋನು ಗೌಡ ಮನೆ ಪ್ರವೇಶಿಸಿದರೆ ರಾಕೇಶ್ ಹಾಗೂ ಅಮೂಲ್ಯ ಗೌಡ ನಡುವಿನ ಸಂಬಂಧ ಬದಲಾಗಲಿದೆ.
ಇನ್ನು ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿದ್ದವರು, ಅದರಲ್ಲಿಯೂ ಪ್ರಶಾಂತ್ ಸಂಬರ್ಗಿಯನ್ನು ಬಿಗ್‌ಬಾಸ್‌ನ ಒಳಗೆ ಹಾಗೂ ಹೊರಗೂ ವಿರೋಧಿಸುತ್ತಲೇ ಬಂದವರು. ಈಗ ಅವರು ಮನೆ ಪ್ರವೇಶಿಸಿದರೆ ಪ್ರಶಾಂತ್ ಸಂಬರ್ಗಿಗೆ ಸಂಕಷ್ಟ ಉಂಟಾಗುವ ಸಾಧ್ಯತೆ ಇದೆ.