
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೆಎಸ್ಆರ್ ಟಿಸಿ ಬಸ್ ಸಂಚಾರ ಆರಂಭ: ದರ ಹೀಗಿದೆ...!
Saturday, November 5, 2022
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದಿಂದ ಬಸ್ ವ್ಯವಸ್ಥೆ ಇಲ್ಲದೆ ಜನರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಿತ್ತು. ಆದರೆ ಇದೀಗ ಜನತೆಯ ಬೇಡಿಕೆಯಂತೆ ವಿಮಾನ ನಿಲ್ದಾಣಕ್ಕೆ ನಗರದಿಂದ, ರೈಲ್ವೆ ನಿಲ್ದಾಣದಿಂದ ಬಸ್ ಸಂಚಾರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದೆ. ಈ ಕೆಎಸ್ಆರ್ ಟಿಸಿ ವೋಲ್ವೊ ಬಸ್ ದರ ಹೀಗಿದೆ.
ಮಂಗಳೂರು ರೈಲು ನಿಲ್ದಾಣದಿಂದ ಹೊರಡುವ ವೋಲ್ವೊ ಬಸ್ ಗೆ ಜ್ಯೋತಿಯವರೆಗೆ 20 ರೂ., ಕೆಎಸ್ಆರ್ ಟಿಸಿ ಬಿಜೈ ವರೆಗೆ 25 ರೂ., ಕುಂಟಿಕಾನದವರೆಗೆ 30ರೂ., ಕೊಂಚಾಡಿಯವರೆಗೆ 35ರೂ., ಕಾವೂರಿನವರೆಗೆ 40ರೂ., ಮರವೂರಿನವರಗೆ 60ರೂ., ಕರಂಬಾರು ವಿಮಾನ ನಿಲ್ದಾಣದವರೆಗೆ 70 ರೂ. ದರ ನಿಗದಿ ಪಡಿಸಲಾಗಿದೆ.
ಇನ್ನು ಇದೇ ಬಸ್ ನಲ್ಲಿ ಜ್ಯೋತಿಯಿಂದ ಬರುವವರಿಗೆ ಕೆಎಸ್ಆರ್ ಟಿಸಿ ಬಿಜೈವರೆಗೆ 20ರೂ., ಕುಂಟಿಕಾನದವರೆಗೆ 25ರೂ., ಕೊಂಚಾಡಿವರೆಗೆ 30ರೂ., ಕಾವೂರುವರೆಗೆ 35ರೂ., ಮರವೂರುವರೆಗೆ 50ರೂ., ಕರಂಬಾರು ವಿಮಾನ ನಿಲ್ದಾಣದವರೆಗೆ 60ರೂ. ದರ ನಿಗದಿ ಪಡಿಸಲಾಗಿದೆ. ಇನ್ನು ಕೆಎಸ್ಆರ್ ಟಿಸಿ ಬಿಜೈಯಿಂದ ಬಸ್ ಏರುವವರಿಗೆ ಕುಂಟಿಕಾನದವರೆಗೆ 20ರೂ, ಕೊಂಚಾಡಿಯವರೆಗೆ 25ರೂ, ಕಾವೂರುವರೆಗೆ 30ರೂ, ಮರವೂರುವರೆಗೆ 40ರೂ,ಮತ್ತು ಕರಂಬಾರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 50 ರೂ. ದರ ನಿಗದಿ ಪಡಿಸಲಾಗಿದೆ.
ಇನ್ನು ಕುಂಟಿಕಾನದಿಂದ ಬಸ್ ಹತ್ತುವ ಪ್ರಯಾಣಿಕರಿಗೆ ಕೊಂಚಾಡಿವರೆಗೆ 20ರೂ, ಕಾವೂರುವರೆಗೆ 25ರೂ, ಮರವೂರುವರೆಗೆ 30ರೂ, ಕರಂಬಾರುವರೆಗೆ 40ರೂ. ದರ ನಿಗದಿಪಡಿಸಲಾಗಿದೆ. ಇನ್ನು ಕೊಂಚಾಡಿಯಿಂದ - ಕಾವೂರುವರೆಗೆ 20ರೂ, ಮರವೂರು ವರೆಗೆ 30ರೂ, ಕರಂಬಾರುವರೆಗ 40 ರೂ, ಕಾವೂರುನಿಂದ - ಮರವೂರುವರಗೆ 20ರೂ, ಕರಂಬಾರುವರೆಗೆ 30ರೂ. ಪ್ರಯಾಣದರ ನಿಗದಿಪಡಿಸಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.