ಲಾಟರಿ ಖರೀದಿಸುವುದು ವ್ಯರ್ಥವೆಂದು ನಂಬಿದ್ದ ವ್ಯಕ್ತಿ ಖರೀದಿಸಿರುವ ಮೊದಲ ಲಾಟರಿಗೇ ಕೋಟಿ ಗೆದ್ದ...!
ವರ್ಜಿನಿಯಾ(ಅಮೇರಿಕಾ): ಲಾಟರಿ ಖರೀದಿಸುವುದೆಂದರೆ ಹಣ ಕಳೆದುಕೊಂಡಂತೆ ಎನ್ನುವವರು ಕೆಲವರು ಇರುತ್ತಾರೆ. ಇದೇ ರೀತಿ ಹೇಳುತ್ತಿದ್ದ ಮೊದಲ ಬಾರಿ ಲಾಟರಿ ಖರೀದಿಸಿರುವ ಲಾಟರಿಗೆ ಕೋಟಿ ರೂ. ಜಾಕ್ ಪಾಟ್ ಹೊಡೆದಿದ್ದಾನೆ.
ಹ್ಯಾಂಪ್ಟನ್, ವರ್ಜೀನಿಯಾ ಮೂಲದ ಡ್ಯಾನಿ ಜಾನ್ಸನ್ ಎಂದೂ ಲಾಟರಿ ಖರೀದಿಸಿದವರಲ್ಲ. ಅವರು ಲಾಟರಿಗೆ ಹಣ ಹಾಕುವುದೆಂದರೆ ವ್ಯರ್ಥವೆಂದೇ ನಂಬಿದ್ದರು. ಆದರೆ ಡ್ಯಾನಿ ಸ್ನೇಹಿತ ಲಾಟರಿಯ ಚಟವುಳ್ಳವರಾಗಿದ್ದು, ಆತ ಡ್ಯಾನಿಗೆ ಸದಾ ಲಾಟರಿ ಖರೀದಿಸಲು ಒತ್ತಾಯಿಸುತ್ತಿದ್ದ. ಆದ್ದರಿಂದ ಸ್ನೇಹಿತನ ಒತ್ತಾಯಕ್ಕೆ ಕಟ್ಟುಬಿದ್ದು ಡ್ಯಾನಿ ಮೊದಲ ಬಾರಿ ಲಾಟರಿ ಖರೀದಿಸಿದ್ದಾರೆ.
ನ.5 ರಂದು ಲಾಟರಿ ಏಜೆನ್ಸಿಯ ವೆಬ್ ಸೈಟ್ ನಿಂದ ಡ್ಯಾನಿ ಜಾನ್ಸನ್ ಲಾಟರಿ ಖರೀದಿಸಿದ್ದರು. ಆ ಟಿಕೆಟ್ 5 ವಿನ್ನಿಂಗ್ ನಂಬರ್ ನಲ್ಲಿ 4 ರಲ್ಲಿ ಮ್ಯಾಚ್ ಆಗಿದೆ. ಈ 4 ನಂಬರ್ ಗಳು ಮ್ಯಾಚ್ ಆಗಿರುವುದರಿಂದ ಡ್ಯಾನಿ $50,000 ( 40,83,225.00 ರೂ.) ಗೆದ್ದಿದ್ದಾರೆ. ಆದರೆ ಜಾನ್ಸನ್ ಹೆಚ್ಚು ಹಣ ಪಾವತಿಸಿ ಪವರ್ ಪ್ಲೇ ಆಟವನ್ನು ಆಡಿದ್ದಾರೆ. ಇದರಿಂದ ಅವರು ಲಾಟರಿ ಮೂರು ಪಟ್ಟು ಹೆಚ್ಚು ಹಣ ಗೆದ್ದಿದ್ದಾರೆ. ಡ್ಯಾನಿ ಬರೋಬ್ಬರಿ $150 000 ( ಅಂದಾಜು 1.22 ಕೋಟಿ ರೂ.) ಜಾಕ್ ಪಾಟ್ ಗೆದ್ದುಕೊಂಡಿದ್ದಾರೆ.
ಡ್ಯಾನಿ ನಿವೃತ್ತರಾಗಿದ್ದು, ಸದ್ಯ ಅವರು ಹಣವನ್ನು ಖರ್ಚು ಮಾಡುವ ಯಾವ ಯೋಜನೆಯನ್ನು ಹಾಕಿಕೊಂಡಿಲ್ಲ. ಆದರೆ ತನ್ನ ಸ್ನೇಹಿತನಿಗೆ ಉಡುಗೊರೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.