ಶುಕ್ರನ ಈ ರಾಶಿ ಪರಿವರ್ತನೆಯಿಂದ ಈ ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ..!
Thursday, November 24, 2022
ಶುಕ್ರನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದ್ದಾರೆ. ಈ ಸಮಯದಲ್ಲಿ ಈ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ.ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಮೇಷ ರಾಶಿ
ಮೇಷ ರಾಶಿ: ಡಿಸೆಂಬರ್ ತಿಂಗಳಲ್ಲಿ ಶುಕ್ರನು ಮೇಷ ರಾಶಿಯವರ ಅದೃಷ್ಟದ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಇದರ ಪ್ರಭಾವದಿಂದಾಗಿ ಮೇಷ ರಾಶಿಯವರು ಈ ತಿಂಗಳು ಶುಕ್ರನ ಕೃಪೆಗೆ ಪಾತ್ರರಾಗಲಿದ್ದಾರೆ.
ಸಿಂಹ ರಾಶಿ: ಈ ರಾಶಿಯ ಐದನೇ ಮನೆಯಲ್ಲಿ ಶುಕ್ರ ಸಂಚರಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಐದನೇ ಮನೆಯನ್ನು ಪ್ರೀತಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹಾಗಾಗಿ, ಐದನೇ ಮನೆಯಲ್ಲಿ ಶುಕ್ರನ ಸಂಚಾರವು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭವನ್ನು ಹೊತ್ತು ತರಲಿದೆ.
ವೃಶ್ಚಿಕ ರಾಶಿ: ಐಶಾರಾಮಿ ಜೀವನ ಕಾರಕನಾದ ಶುಕ್ರನು ವೃಶ್ಚಿಕ ರಾಶಿಯ ಎರಡನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಎರಡನೇ ಮನೆಯನ್ನು ಸಂಪತ್ತಿನ ಮನೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಡಿಸೆಂಬರ್‌ನಲ್ಲಿ ವೃಶ್ಚಿಕ ರಾಶಿಯವರಿಗೆ ವ್ಯವಹಾರಗಳು ವೇಗವನ್ನು ಪಡೆಯಲಿವೆ.
ಕುಂಭ ರಾಶಿ: ಡಿಸೆಂಬರ್ ತಿಂಗಳಲ್ಲಿ ಶುಕ್ರನು ಕುಂಭ ರಾಶಿಯವರ ಲಾಭದಾಯಕ ಮನೆಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಕುಂಭ ರಾಶಿಯವರಿಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.