
ನಂದಿನಿ ಹಾಲು ಬೆಲೆ ಪರಿಷ್ಕರಣೆ: ಕೆಎಂಎಫ್ ಹೇಳಿದ್ದೇನು..?
Tuesday, November 15, 2022
ನಂದಿನಿ ಹಾಲು ಬೆಲೆ ಪರಿಷ್ಕರಣೆ: ಕೆಎಂಎಫ್ ಹೇಳಿದ್ದೇನು..?
ನಂದಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ದರದಲ್ಲಿ ಭಾರೀ ಏರಿಕೆಯಾಗಿದೆ ಎಂಬ ವದಂತಿಗೆ ಕೆಎಂಎಫ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕ ಒಕ್ಕೂಟ ತೆರೆ ಎಳೆದಿದೆ.
ಹಾಲಿನ ದರದಲ್ಲಿ ಏರಿಕೆ ಇಲ್ಲ ಎಂದು ಹೇಳುವ ಮೂಲಕ ಜನಸಾಮಾನ್ಯರ ಆತಂಕವನ್ನು ಒದ್ದೋಡಿಸಿದೆ.
ಹಾಲಿನ ಡೀಲರ್‌ಗಳಿಗೆ ಮಾಹಿತಿ ನೀಡಿರುವ ಕೆಎಂಎಫ್ ಮತ್ತು ಹಾಲು ಉತ್ಪಾದಕರ ಒಕ್ಕೂಟ ಸದ್ಯಕ್ಕೆ ದರ ಬದಲಾವಣೆ ಇಲ್ಲ ಎಂದು ಹೇಳಿದೆ. ಸದ್ಯಕ್ಕೆ ಹಾಲಿನ ಪ್ಯಾಕೇಟ್‌ಗಳಲ್ಲಿ ನಮೂದಿಸಿರುವ ದರವನ್ನು ಮಾತ್ರ ಗ್ರಾಹಕರಿಂದ ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.
ಉತ್ಕೃಷ್ಟ ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ನಂದಿನಿ ಬ್ರ್ಯಾಂಡ್‌ನ್ನು ಎಲ್ಲರೂ ಖರೀದಿಸಿ ಆರೋಗ್ಯ ಹಾಗೂ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವಂತೆ ಅದು ಗ್ರಾಹಕರಲ್ಲಿ ಮನವಿ ಮಾಡಿದೆ.