ವ್ಯಕ್ತಿಯ ಜೀವಕ್ಕೆ ಕಂಟಕವಾದ ಆಮ್ಲೇಟ್...!
Saturday, November 5, 2022
ಮಂಗಳೂರು: ಆಮ್ಲೇಟ್ ಸೇವನೆ ಮಾಡುತ್ತಿದ್ದಾಗ ತುಣುಕೊಂದು ಗಂಟಲಲ್ಲಿ ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತೆಲಂಗಾಣದ ಜಾನಗಾಮಾ ಜಿಲ್ಲೆಯ ಬಚ್ಚನ್ನಾಪೇಟ್ ಎಂಬಲ್ಲಿ ನಡೆದಿದೆ.
ಏಡುಲಕಂಟಿ ಭೂಪಾಲ ರೆಡ್ಡಿ (38) ಮೃತಪಟ್ಟ ವ್ಯಕ್ತಿ.
ಈತ ಮದ್ಯಸೇವನೆ ಮಾಡಲೆಂದು ಗೆಳೆಯರೊಂದಿಗೆ ಬಾರ್ ಗೆ ಹೋಗಿದ್ದಾನೆ. ಮದ್ಯಸೇವನೆಯೊಂದಿಗೆ ಸೈಡ್ ಡಿಶ್ ಗೆಂದು ಆಮ್ಲೆಟ್ ಅನ್ನು ಚಪ್ಪರಿಸುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಆಮ್ಲೇಟ್ ತುಣುಕೊಂದು ಆತನ ಗಂಟಲಲ್ಲಿ ಸಿಲುಕಿದೆ. ಅತ್ತ ನುಂಗಲೂ ಆಗದೆ ಇತ್ತ ಉಗುಳಲೂ ಆಗದೆ ಆತ ಉಸಿರುಗಟ್ಟಿ ನೆಲದಲ್ಲಿ ಬಿದ್ದು ಒದ್ದಾಡಿದ್ದಾನೆ.
ತಕ್ಷಣ ಆತನ ಜೊತೆಗಿದ್ದ ಮಿತ್ರರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಭೂಪಾಲ ರೆಡ್ಡಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.