ಲಾಡ್ಜ್ ನೊಳಗಿತ್ತು ಸೀಕ್ರೆಟ್ ರೂಂ... ಸಿಸಿಬಿ ದಾಳಿಯಿಂದ ರಹಸ್ಯ ಬಯಲು
Thursday, November 17, 2022
ಬೆಂಗಳೂರು: ಪೊಲೀಸರ ಕಣ್ಣಿಗೆ ಮಣ್ಣೆರಚಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಕಾಟನ್ ಪೇಟೆಯ ಲಾಡ್ಜೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 6 ಆರೋಪಿಗಳನ್ನು ಬಂಧಿಸಿ, 7 ಮಹಿಳೆಯರನ್ನು ರಕ್ಷಿಸಿದ್ದಾರೆ.
ಕಾಟನ್ ಪೇಟೆಯ ದುರ್ಗಾ ಪ್ಯಾಲೆಸ್ ಲಾಡ್ಜ್ ಮೇಲೆ ಸಿಸಿಬಿ ರೈಡ್ ನಡೆಸಿ ವೇಶ್ಯಾವಾಟಿಕೆ ಕೃತ್ಯವನ್ನು ಬಹಿರಂಗ ಪಡಿಸಿದೆ. ಹಿಂದೆಯೂ ಈ ಲಾಡ್ಜ್ ಗೆ ಸಿಸಿಬಿ ದಾಳಿನಡೆಸಿತ್ತು. ಆದರೆ ಆಗೆಲ್ಲಾ ಪೊಲೀಸರು ಬರಿಗೈಲಿ ವಾಪಸ್ಸಾಗಿದ್ದರು. ಇದಕ್ಕೆ ಕಾರಣ... ಅಲ್ಲಿದ್ದ ಸೀಕ್ರೆಟ್ ರೂಂ..!
ಸಿಸಿಬಿ ಪೊಲೀಸರು ದಾಳಿ ಮಾಡುತ್ತಾರೆ ಎಂಬ ಕ್ಲೂ ಸಿಕ್ಲಿದಾಕ್ಷಣ ವೇಶ್ಯಾವಾಟಿಕೆ ದಂಧೆಕೋರರು ಹುಡುಗಿಯರನ್ನು ಲಾಡ್ಜ್ ನಲ್ಲಿದ್ದ ಸೀಕ್ರೆಟ್ ರೂ ಒಳಗೆ ಕಳಿಸಿಬಿಡುತ್ತಿದ್ದರು. ಲಾಡ್ಜ್ ರೂಮ್ ಗಳಲ್ಲಿ ಯಾರೂ ಇಲ್ಲ ಎಂದು ಪೊಲೀಸರು ವಾಪಸ್ ಹೋದ ಬಳಿಕ, ಮತ್ತೆ ದಂಧೆ ಮುಂದುವರೆಸುತ್ತಿದ್ದರು.
ಆದರೆ ಈ ಬಾರಿ ದಂಧೆಕೋರರ ಅದೃಷ್ಟ ನೆಟ್ಟಗಿರಲಿಲ್ಲ. ಹಾಗಾ ಬಯಲಾಗಿಬಿಟ್ಟಿದೆ ಲಾಡ್ಜ್ ನಲ್ಲಿದ್ದ ಸೀಕ್ರೆಟ್ ರೂಂ ರಹಸ್ಯ. ಯುವತಿಯರನ್ನು ಸೀಕ್ರೆಟ್ ರೂಮಿನಲ್ಲಿಟ್ಟಿದ್ದ ಆರೋಪಿಗಳನ್ನೂ ಬಂಧಿಸಲಾಗಿದೆ. ಉಸಿರಾಡೋದಕ್ಕೂ ಸಾಧ್ಯವಾಗದ ರೂಮ್‌ನಲ್ಲಿ ಹುಡುಗಿಯರನ್ನು ಕೂಡಿಹಾಕುತ್ತಿದ್ದ ವಿಷಯವೂ ಬಯಲಾಗಿದೆ. 6 ಆರೋಪಿಗಳನ್ನು ಬಂಧಿಸಿ, 7 ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ. ಸಿಸಿಬಿ ತನಿಖೆ ಮುಂದುವರೆದಿದೆ.