ಅಪ್ರಾಪ್ತೆಯ ಅತ್ಯಾಚಾರಗೈದು ಕೊಲೆ: ಆರೋಪಿಯ ವಯಸ್ಸು ಕೇಳಿದರೆ ದಂಗಾಗುತ್ತೀರಾ....!
Thursday, November 3, 2022
ಕಲಬುರಗಿ: ಕಬ್ಬಿನ ಗದ್ದೆಯಲ್ಲಿ ಶಾಲಾ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿರುವ ಹೇಯ ಕೃತ್ಯವೊಂದು ಆಳಂದ ತಾಲೂಕಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಆಳಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಕೇವಲ 16 ವರ್ಷದ ಬಾಲಕ ಎಂಬುದೇ ಆತಂಕಕಾರಿ ಸಂಗತಿಯಾಗಿದೆ.
ಇಷ್ಟು ಸಣ್ಣ ವಯಸ್ಸಿಗೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಆರೋಪ ಹೊತ್ತಿರುವುದು ನಿಜಕ್ಕೂ ಆಘಾತಕಾರಿ. ಆರೋಪಿ ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕ ಮೃತ ಬಾಲಕಿಯು ಬಯಲು ಶೌಚಕ್ಕೆ ಹೋಗುವ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಆತನನ್ನು ಗಮನಿಸಿದ ಬಾಲಕಿ ಹೆದರಿ ಅಲ್ಲಿಂದ ಓಡಿ ಹೋಗುವುದಕ್ಕೆ ಮುಂದಾಗಿದ್ದಾಳೆ. ಆದರೆ ಓಡಿ ಹೋಗುತ್ತಿದ್ದ ಆಕೆಯನ್ನು ಬೆನ್ನಟ್ಟಿ ಹಿಂದೆಯಿಂದ ತಬ್ಬಿಕೊಂಡು ಬಲವಂತವಾಗಿ ಕಬ್ಬಿನ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಅತ್ಯಾಚಾರ ನಡೆಸಿದ ಬಳಿಕ ಬಾಲಕಿ ವಿಚಾರವನ್ನು ಬಯಲು ಮಾಡುತ್ತಾಳೆಂದು ಹೆದರಿ, ವೇಲ್‌ನಿಂದ ಆಕೆಯ ಕುತ್ತಿಗೆ ಬಿಗಿದು, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಹೊಲದ ಹಿಂದಿದ್ದ ನಾಲೆಯಲ್ಲಿ ರಕ್ತದ ಕಲೆಯನ್ನು ತೊಳೆದುಕೊಂಡು ಏನೂ ಆಗದಂತೆ ಮನೆಗೆ ತೆರಳಿದ್ದಾನೆ. ಈತ ಗ್ರಾಮದಲ್ಲಿ ಒಬ್ಬನೆ ಇರುತ್ತಿದ್ದ. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮೊಬೈಲ್ ಗೀಳು ಹತ್ತಿಸಿಕೊಂಡ ಈತ ಹೆಚ್ಚಾಗಿ ಅಶ್ಲೀಲ ವಿಡಿಯೋ ನೋಡುತ್ತಿದ್ದನಂತೆ. ಅದರಲ್ಲೂ ಮಹಿಳೆಯರ ಮೇಲಿನ ಅತ್ಯಾಚಾರದ ವೀಡಿಯೋಗಳನ್ನೇ ನೋಡುತ್ತಿದ್ದ ಎಂದು ತನಿಳೆಯಲ್ಲಿ ತಿಳಿದು ಬಂದಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ವಿಚಾರಣೆ ನಡೆಸಿ, ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಡಿಜಿ ಐಜಿಪಿಯಿಂದ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಈ ಪ್ರಕರದ ಚಾರ್ಜ್ ಶೀಟ್ ಅನ್ನು ಹತ್ತು ದಿನದ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕಲಬುರಗಿ ಎಸ್ಪಿ ಇಶಾಪಂತ್ ಹೇಳಿಕೆ ನೀಡಿದ್ದಾರೆ.