ಪುಷ್ಪ ಸಿನಿಮಾದ ಕಲೆಕ್ಷನ್ ಅನ್ನೂ ಬ್ರೇಕ್ ಮಾಡಿದ ಕಾಂತಾರ
Saturday, November 12, 2022
ಬೆಂಗಳೂರು: ಕಾಂತಾರ ಸಿನಿಮಾ ಎಲ್ಲೆಲ್ಲೂ ಪ್ರಸಿದ್ಧಿ ಪಡೆದಿರುವುದೂ ಎಲ್ಲರಿಗೂ ಗೊತ್ತೇ ಇದೆ. ಇದೀಗ ಕಲೆಕ್ಷನ್ ವಿಚಾರದಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾವನ್ನು ಕೂಡ ರಿಷಭ್ ಶೆಟ್ಟಿಯವರ ಕಾಂತಾರ ಸಿನಿಮಾ ಹಿಂದಿಕ್ಕಿದೆ.
ಪುಷ್ಪ ಸಿನಿಮಾ ಬಿಡುಗಡೆಯಾದಾಗಿನಿಂದ ಕೊನೆಯ ಪ್ರದರ್ಶನದವರೆಗೆ ಲೈಫ್ ಟೈಮ್ ಗಳಿಸಿದ್ದು 355 ರಿಂದ 365 ಕೋಟಿ ರೂ. ಆದರೆ ಕಾಂತಾರ ಚಿತ್ರ 42 ದಿನಗಳಲ್ಲಿ 355.19 ಕೋಟಿ ರೂಪಾಯಿ ಗಳಿಸಿ, ಪುಷ್ಪದ ಕಲೆಕ್ಷನ್ ರೆಕಾರ್ಡನ್ನು ಬ್ರೇಕ್ ಮಾಡಿದೆ. ವಿಕಿಪೀಡಿಯಾದ ಮಾಹಿತಿ ಪ್ರಕಾರ ಕಾಂತಾರ ಇದುವರೆಗೆ 355 ಕೋಟಿ 19 ಲಕ್ಷ ರೂ. ಕಲೆಕ್ಷನ್ ಮಾಡಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ದಾಖಲೆಯನ್ನು ಮುರಿದಿರುವ ಕಾಂತಾರ ಈಗ ಪುಷ್ಪ ಸಿನಿಮಾದ ದಾಖಲೆಯನ್ನೂ ಮುರಿದು ಮುನ್ನುಗ್ಗುತ್ತಿದೆ.
ಕೆಜಿಎಫ್ -1 ಸಿನಿಮಾದ ಲೈಫ್‌ಟೈಮ್ ಕಲೆಕ್ಷನ್ 250 ಕೋಟಿ ರೂ. ಆಗಿತ್ತು. ಆದರೆ ಅಖಾಡಕ್ಕಿಳಿದ ಮೂರೇ ವಾರದಲ್ಲಿ ಕೆಜಿಎಫ್ ರೆಕಾರ್ಡನ್ನು ಕಾಂತಾರ ಸರಿಗಟ್ಟಿದೆ. ಅಂದ ಹಾಗೆ ಆ ಎಲ್ಲಾ ಸಿನಿಮಾಗಳ ನಿರ್ಮಾಣದ ಬಜೆಟ್‌ಗೆ ಹೋಲಿಸಿದರೆ ಕಾಂತಾರ ನಿರ್ಮಾಣಕ್ಕೆ ಮಾಡಿರುವ ಖರ್ಚು ಕೇವಲ 16 ಕೋಟಿ ರೂಪಾಯಿ. ಇದು ಆ ಸಿನಿಮಾಗಳ ಬಜೆಟ್ ಗಳಿಗೆ ಹೋಲಿಕೆ ಮಾಡಿದರೆ ಏನೇನೂ ಅಲ್ಲ.