ಆರೋಗ್ಯ ವಿಚಾರಿಸಿದ ನಿರೂಪಕಿಗೆ ನಾನಿನ್ನೂ ಸತ್ತಿಲ್ಲ ಎಂದು ಕಣ್ಣೀರಿಟ್ಟ ನಟಿ ಸಮಂತಾ
Tuesday, November 8, 2022
ಹೈದರಾಬಾದ್: ಡಿವೋರ್ಸ್ ಬಳಿಕ ಕೂಡ ಸದಾ ಸುದ್ದಿಯಲ್ಲಿರುವ ನಟಿ ಸಮಂತಾ ಸದ್ಯ `ಯಶೋದಾ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಡೆದ ಸಂದರ್ಶನವೊಂದರಲ್ಲಿ ಅವರಿಗೆ ಆರೋಗ್ಯದ ಬಗ್ಗೆ ನಿರೂಪಕಿ ಪ್ರಶ್ನೆ ಕೇಳಿದಾಗ ನಾನಿನ್ನೂ ಸತ್ತಿಲ್ಲ ಎಂದು ಸಮಂತಾ ಕಣ್ಣೀರಿಟ್ಟಿದ್ದಾರೆ.
ನಾಗಚೈತನ್ಯರಿಂದ ವಿಚ್ಛೇದನ ಪಡೆದ ಬಳಿಕ ಸಮಂತಾ ವೃತ್ತಿರಂಗದಲ್ಲಿ ಮಿಂಚುತ್ತಿದ್ದಾರೆ. ಅವರ ವೈಯುಕ್ತಿಕ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಸಮಂತಾ ಮಾತನಾಡಿ, ಸಂದರ್ಶನದಲ್ಲಿ ನಿರೂಪಕಿ ಕೇಳಿದ ಪ್ರಶ್ನೆಗೆ ಅವರು ಭಾವುಕರಾದರು.
`ಯಶೋದಾ’ ಸಿನಿಮಾ ಪ್ರಚಾರದಲ್ಲಿ ಅನಾರೋಗ್ಯದ ನಡುವೆಯೂ ಸಮಂತಾ ಭಾಗಿದ್ದಾರೆ. ಸದ್ಯಕ್ಕೆ ನಾನು ಚೆನ್ನಾಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿದೆ. ನಾನಿನ್ನೂ ಸತ್ತಿಲ್ಲ ಎಂದು ತನ್ನ ಭಾವನೆಗಳನ್ನು ನಿಯಂತ್ರಿಸಲಾಗದೆ ಕಣ್ಣೀರಿಟ್ಟಿದ್ದಾರೆ. ಇನ್ನು ಸಮಂತಾ ನಟನೆಯ ಬಹುನಿರೀಕ್ಷಿತ ಸಿನಿಮಾ ಯಶೋದಾ ನ.11ಕ್ಕೆ ತೆರೆ ಕಾಣಲಿದೆ. ಬಾಡಿಗೆ ತಾಯ್ತನದ ಆಧರಿಸಿದ ಕಥೆಯ ಮೂಲಕ ಯಶೋದಾ ಆಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.