ಅತಿಯಾದ ನಿದ್ದೆ ಕೂಡ ದೇಹಕ್ಕೆ ಹಾನಿಕಾರ..!! ನಿದ್ದೆಯಿಂದ ಆಗುವ ದುಷ್ಟ ಪರಿಣಾಮಗಳು ಯಾವುವು ಗೊತ್ತಾ..?
Thursday, November 10, 2022
ಅತಿಯಾದ ನಿದ್ದೆ ಆರೋಗ್ಯಕ್ಕೆ ಅಗತ್ಯವಿಲ್ಲ. ಬದಲಾಗಿ ಇದು ರೋಗಗಳಿಗೆ ಕಾರಣವಾಗಬಹುದು.ಒಬ್ಬ ವ್ಯಕ್ತಿಯು ದಿನಕ್ಕೆ 8 ಗಂಟೆಗಳ ಕಾಲ ಮಲಗಿದರೆ, ಅವನು ತುಂಬಾ ಆರೋಗ್ಯವಂತನಾಗಿರುತ್ತಾನೆ.
ಹಗಲಿನಲ್ಲಿ ಹೆಚ್ಚು ಕಾಲ ನಿದ್ದೆಗೆ ಸಮಯ ಮೀಸಲಿಟ್ಟವರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .
ದಿನಕ್ಕೆ ೮ ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ದೆ ಮಾಡುವವರಲ್ಲಿ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಧ್ಯಯನದ ಮೂಲಕ ಸಾಬೀತುಪಡಿಸಿದ್ದಾರೆ.
ಅತಿಯಾದ ನಿದ್ದೆಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಕೊಬ್ಬಿನ ಶೇಖರಣೆ ಮತ್ತು ಹೃದಯದ ತೊಂದರೆಗಳು ಉಂಟಾಗುತ್ತವೆ. ಜೊತೆಗೆ ತಲೆನೋವು, ಬೆನ್ನು ನೋವು, ಹೃದಯಾಘಾತದಂತಹ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ.
ಹೆಚ್ಚು ನಿದ್ರಿಸುವ ಜನರು ತೀವ್ರ ಖಿನ್ನತೆ, ತಲೆನೋವು, ಅಸಹಜ ಹೃದಯ ಬಡಿತಗಳು ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಹಗಲಿನ ನಿದ್ರೆಯನ್ನು ಸಾಧ್ಯವಾದಷ್ಟು ತಪ್ಪಿಸಬೇಕು.