
ಬೈಕಂಪಾಡಿ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳ ಸಾಧನೆ: ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
Saturday, November 5, 2022
ಮಂಗಳೂರಿನ ಬೈಕಂಪಾಡಿ ಮೀನಕಳಿಯ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯದ ಗಮನ ಸೆಳೆದಿದ್ದಾರೆ. ಬಡ ಕಾರ್ಮಿಕ ಕುಟುಂಬದಿಂದಲೇ ಬಂದಿರುವ ವಿದ್ಯಾರ್ಥಿಗಳು 14 ಮತ್ತು 17 ವರ್ಷ ವಯೋಮಾನದ ಕುಸ್ತಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯ 14 ಮತ್ತು 17 ವರ್ಷ ವಯೋಮಾನದ ವಿಭಾಗದಲ್ಲಿ ಕುಮಾರ ಲಕ್ಷ್ಮಪ್ಪ ತಳ್ಯಾಳ, ದೇವರಾಜ ಲಕ್ಷ್ಮಪ್ಪ ಗೊಂದೆಪನ್ನವರ್, ಅರುಣ ವಿಜಯಕುಮಾರ್, ರಾಜ ಲಕ್ಷ್ಮಣ ತಳ್ಯಾಳ, ಕೃಷ್ಣ ರಮೇಶ ಮಾದರ, ಸೃಜನ್ ಕುಮಾರ್, ಬಾಲರಾಜ ಮಾರುತಿ ಮಡ್ಡಿ ಮತ್ತು ಮಂಜುನಾಥ ಕಾಕಪ್ಪ ಅವರು ಎಲ್ಲರ ನಿರೀಕ್ಷೆ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇವರಲ್ಲಿ ಇವರಲ್ಲಿ ದೇವರಾಜ ಲಕ್ಷ್ಮಪ್ಪ ಗೊಂದೆಪನ್ನವರ್, ರಾಜ ಲಕ್ಷ್ಮಣ ತಳ್ಯಾಳ ಮತ್ತು ಅರುಣ ವಿಜಯಕುಮಾರ್ ಅವರು ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿ ಸ್ಪರ್ಧಿಗಳನ್ನು ಸೋಲಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ಧಾರೆ.
ಈ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನ ಮತ್ತು ಕೀಡಾಕೂಟದಲ್ಲಿ ಮೆರೆದ ಸಾಧನೆಗೆ ಖ್ಯಾತ ಕುಸ್ತಿ ತರಬೇತುದಾರ…. ಕಾರಣರಾಗಿರುತ್ತಾರೆ. ಇದುವರೆಗೂ ಉಚಿವಾಗಿ ತರಬೇತಿ ನೀಡುತ್ತಿದ್ದ ಶ್ರೀಯುತರು ಮಕ್ಕಳಿಗೆ ಮುಂದೆಯೂ ಕುಸ್ತಿ ತರಬೇತಿ ನೀಡುವ ಭರವಸೆಯನ್ನು ನೀಡಿರುವುದು ವಿದ್ಯಾರ್ಥಿಗಳಲ್ಲಿ ಸಂತಸ ಮೂಡುವಂತೆ ಮಾಡಿದೆ.
ವಿದ್ಯಾರ್ಥಿಗಳ ಸಾಧನೆಗೆ ಬೈಕಂಪಾಡಿ ಮೀನಕಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ವೃಂದ ಸಂತಸ ವ್ಯಕ್ತಪಡಿಸಿದೆ.
ಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ(ರಿ)ಮಂಗಳೂರು ತಾಲೂಕು ಅಧ್ಯಕ್ಷ ರಾದ ಶ್ರೀ ರಾಘವೇಂದ್ರ ರಾವ್, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶಾಂತಲಾ ಹಾಗೂ ಸಹಶಿಕ್ಷಕರಾದ ವಸಂತ ಪಾಲನ್ ಅವರು ಜಿಲ್ಲಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಿದ್ದಾರೆ.
....