ಮಂಗಳೂರು: ಆಟೋರಿಕ್ಷಾದಲ್ಲಿ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರೀಕ್ ಗೆ ಟಾರ್ಗೆಟ್ ಕದ್ರಿ ದೇವಸ್ಥಾನ ಆಗಿತ್ತಾ?
Thursday, November 24, 2022
ಮಂಗಳೂರು: ನಗರದ ಆಟೋರಿಕ್ಷಾದಲ್ಲಿ ಬಾಸ್ಟ್ ಆಗಿರುವ ಪ್ರಕರಣಕ್ಕೆ ಟಾರ್ಗೆಟ್ ಮಂಗಳೂರಿನ ಅತೀ ಪುರಾತನ ದೇವಾಲಯ ಶ್ರೀಕ್ಷೇತ್ರ ಕದ್ರಿ ಆಗಿತ್ತೆಂದು ಉಗ್ರ ಸಂಘಟನೆಯೊಂದು ಒಪ್ಪಿಕೊಂಡಿದೆ. ಈ ಬಗ್ಗೆ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆಯದ್ದೆಂದು ಹೇಳಲಾಗುವ ಪೋಸ್ಟರ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಮಂಗಳೂರಿನ ಅತ್ಯಂತ ಪುರಾತನ ದೇವಾಲಯ. ಈ ಕ್ಷೇತ್ರಕ್ಕೂ ಉತ್ತರ ಪ್ರದೇಶಕ್ಕೂ ನಾಥಪಂಥಕ್ಕೂ ಅವಿನಾಭಾವ ಸಂಬಂಧವಿದೆ. ಇದೀಗ ಈ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿದ್ದೆವು ಎಂದು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಉಗ್ರ ಸಂಘಟನೆ ಹೊಣೆ ಹೊತ್ತಿದೆ ಎಂಬ ಪೋಸ್ಟರ್ ವೈರಲ್ ಆಗಿದೆ. ನಮ್ಮ ದಾಳಿ ಕದ್ರಿ ದೇವಸ್ಥಾನ ಆಗಿತ್ತು. ಆದರೆ ಉದ್ದೇಶಿತ ಗುರಿಯನ್ನು ತಲುಪುವ ಮೊದಲೇ ಬಾಂಬ್ ಸ್ಫೋಟಗೊಂಡಿದೆ ಸಂಘಟನೆ ಹೇಳಿಕೊಂಡಿದೆ ಎಂದು ಹೇಳಿದೆ ಎಂಬ ಸಂಘಟನೆಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇಂದು ಬೆಳಗ್ಗೆ ಕದ್ರಿ ದೇವಸ್ಥಾನಕ್ಕೆ ನಗರ ಸಶಸ್ತ್ರ ಮೀಸಲು ಪಡೆ (City Armed Reserve) ದೇವಸ್ಥಾನದಲ್ಲಿ ತಪಾಸಣೆ ನಡೆಸಿದೆ. ಆದರೆ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಯು ಈ ಸುದ್ದಿ ನಿಖರವೆಂದು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಅಲ್ಲದೆ ಕದ್ರಿ ದೇವಸ್ಥಾನದಲ್ಲಿ ಯಾವುದೇ ಪೊಲೀಸ್ ಭದ್ರತೆ ಕಂಡು ಬರುತ್ತಿಲ್ಲ. ಈ ವಿಚಾರವಾಗಿ ತನಿಖಾ ಸಂಸ್ಥೆಯು ಮಾಹಿತಿ ನೀಡಿದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.