ಸಂಚಾರದಲ್ಲಿದ್ದ ಆಟೋದಲ್ಲಿ ಸ್ಪೋಟ ಆಕಸ್ಮಿಕವಲ್ಲ ಉದ್ದೇಶಪೂರ್ವಕವಾಗಿ ನಡೆದ ಭಯೋತ್ಪಾದನಾ ಕೃತ್ಯ: ಡಿಜಿಪಿ ಪ್ರವೀಣ್ ಸೂದ್ ಟ್ವೀಟ್
Sunday, November 20, 2022
ಮಂಗಳೂರು: ನಗರದ ಹೊರವಲಯದಲ್ಲಿರುವ ಗರೋಡಿ ಸಮೀಪ ಸಂಚಾರದಲ್ಲಿದ್ದ ಆಟೋದಲ್ಲಿ ಬ್ಲಾಸ್ಟ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಪಿ ಪ್ರವೀಣ್ ಸೂದ್ ಅವರು ಟ್ವೀಟ್ ಮಾಡಿ 'ಈ ಸ್ಪೋಟ ಆಕಸ್ಮಿಕವಲ್ಲ ಉದ್ದೇಶಪೂರ್ವಕವಾಗಿ ನಡೆದ ಭಯೋತ್ಪಾದನಾ ಕೃತ್ಯ' ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.
'ಈ ಸ್ಪೋಟ ಆಕಸ್ಮಿಕವಲ್ಲ ಉದ್ದೇಶಪೂರ್ವಕವಾಗಿಯೇ ನಡೆದಿದೆ. ಗಂಭೀರವಾಗಿ ಹಾನಿ ಉಂಟುಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಯೊಂದಿಗೆ ಘಟನೆಯ ಬಗ್ಗೆ ಆಳವಾಗಿ ತನಿಖೆ ನಡೆಸುತ್ತಿದ್ದಾರೆ' ಎಂದು ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದಾರೆ.